
Article · November 14, 2026
ಬೆವರಿನ ಶಿಲ್ಪಿ - ಗಂಡಸಿಗೊಂದು ಕಾವ್ಯ
ಸಂತೋಷ್ ಕುಮಾರ್ ನಡುಮನೆ
ಅಷ್ಟಮಿ ಚಂದ್ರನಂತಹ ಅಗಲ ಹಣೆಯ ಆಸೆ,
ಮುಖದ ಗತ್ತು ಹೆಚ್ಚಿಸುವ ದಪ್ಪನೆಯ ಮೀಸೆ!
ಬೆವರಿನ ಹನಿಗಳ ಕಂಡರು ಕವಿತೆಯಾಗದ ಹಾದಿ,
ಕಷ್ಟದ ಕಥನಕೆ ಸಿಗಲಿಲ್ಲವೇ ಒಂದು ಬೀದಿ!
ಶಂಖದ ಕಂಠದ ಗಂಭೀರ ಕುತ್ತಿಗೆ
ಒಮ್ಮೊಮ್ಮೆ ಅರಳುವುದು ಪಿಸು ಮಾತಿಗೆ
ಜಗತ್ತಿನ ಸದ್ದನ್ನು ಕೇಳುವ ಅಗಲ ಕಿವಿ,
ಬಾಳಿನ ಬಂಡಿಯಲಿ ನಿಸ್ವಾರ್ಥವೇ ದೊಡ್ಡ ಸವಿ!
ಆಜಾನುಬಾಹುವಿನ ಆ ಕಬ್ಬಿಣದ ತೋಳು,
ಬದುಕಿನ ಹಾದಿಯಲಿ ಕಣ್ಣೀರಿನ ಏಳು ಬೀಳು!
ಕಲ್ಲಿನ ಬಂಡೆಯಂತಹ ಅಗಲವಾದ ಎದೆ,
ನೋವನು ನುಂಗಲು ಇದುವೇ ಅಲ್ವೆ ನಿಜವಾದ ಗದೆ
ಬಲಿಷ್ಠವಾದ ಕೈಗಳು, ಗಟ್ಟಿಯಾದ ಬೆರಳು,
ಬಡತನದ ಕತ್ತಲಲಿ ಸವೆಯುತಿಹುದು ಈ ನೆರಳು!
ಆನೆಯ ಸೊಂಡಿಲಿನಂತಹ ಗಟ್ಟಿ ತೊಡೆಗಳ ಮೇಲೆ,
ಕುಟುಂಬದ ಭಾರವ ಹೊತ್ತು ನಿಂತಿದೆ ದವಡೆ ಕೆಳಗೆ!
ಕೆಂಡದಂತಹ ತೀಕ್ಷ್ಣ ಕಣ್ಣಿನ ನೋಟದಲಿ,
ಕನಸುಗಳೆಲ್ಲವೂ ಕರಗಿಹೋದವು ಆ ಹಠದಲಿ!
ಬಾಳೆಕಂದಿನಂಥ ಆ ಮೈಕಟ್ಟಿನ ಮೇಲೆಲ್ಲ,
ಬಿಸಿಲಿನ ಬೇಗೆಯ ಸುಡುವ ಗಾಯ ಕೆಳಗಲ್ಲ!
ಹಗಲಿರುಳು ನುಡಿಯದ ತುಟಿಗಳ ಅಂಚಿನಲಿ,
ಒಂಟಿತನದ ಸಂಕಟದ ಕತ್ತಲು ಆ ಸಂಚಿನಲಿ!
ಸವೆದ ಚಪ್ಪಲಿಯಲಿ ರಕ್ತ ಬಸಿದು ನಡೆದರೂ,
ಬೆವರ ಹನಿಯನು ಒರೆಸುವವನು ಯಾರೂ ಬಾಡಿದರೂ!
ಗಂಡಸಿನ ಈ ದೇಹದ ಪ್ರತಿಯೊಂದು ಅಂಗದಲಿ,
ಬದುಕಿನ ಬಂಡಿಯ ಎಳೆಯುವ ಆ ಸಂಗದಲಿ
ಯಾವ ಶೃಂಗಾರ ಕವಿಗಳು ಒಮ್ಮೆಯೂ ಬರೆಯದ,
ಈ ಕಷ್ಟದ ಕಥನವ ಎಂದೂ ತೊರೆಯದ!
ಆದರೂ ದೃತಿಗೆಡದಿರು ಮೈಮರೆತು ನಿಂತವನೇ,
ಕಷ್ಟದ ಭಾರವ ಹೊತ್ತು ಕಣ್ಣೀರಿಟ್ಟ ಕೂತವನೇ!
ಸಂಸಾರ ಹಡಗನು ದಡ ಸೇರಿಸುವ ತ್ಯಾಗಕೆ,
ಈ ಜಗದಲ್ಲಿ ಬೆಲೆಯೆಲ್ಲಿ ಇವನ ಆ ಮೌನಕೆ!
ಅವಳ ಅಂದದ ಬೆನ್ನೇರಿ ಕವಿಗಳು ಬರೆಯಲಿ,
ಗಂಡಸಿನ ಈ ಕಷ್ಟದ ಕಥೆಯು ಲೋಕಕೆ ಗೊತ್ತಿರಲಿ!
ಕಾವ್ಯದ ಸಾಲಿಗೆ ಸಿಗದ ಆ ನೋವು ಕಂಡು,
ಗಂಡಸಿನ ಕವನವನು ನಾನೇ ಸ್ವತಃ ಬರೆದೆ ನೋಡು!
