Karada Vishwa

Article · March 19, 2026

ಯುಗಾದಿ ಕವಿತೆಗಳು

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

ಕಾಲದ ಹಾದಿಯಲ್ಲಿ..

☘️☘️☘️
ಯುಗ ಯಗಗಳಿಂದಲೂ ಮರಳಿ ಬರುವ ಯುಗಾದಿ
ದ್ವೇಶ ಕಳೆಯಲಿಕಿರುವ ಸುಲಭ ಹಾದೀ...
ಬೇವು ಬೆಲ್ಲವ ಹಂಚಿ,  ಬಾಯಿ ಸಿಹಿಗೊಳಿಸಿರಲು
ಕಳೆದು ಹೋಗಲಿ ಮನದ ಕಹಿಬೇಗುದಿ  .../

ಮೇದಿನೀಪತಿಯವನು, ಉರುಳಿಸುತ ಉರುಳಿಸುತ
ಆಟವಾಡುವ ದಾಳ ' ನಾವೇ '  ಆಗೀ....
ಕಾಲಮುಂದಕೆ ಸಾಗಿ, ನವಯುಗಕೆ ಇದು ಹಾದಿ
ಸಂಭ್ರಮದ ಆಚರಣೆ ನವ ವರುಷವಾಗಿ...../

ಚಿಗುರಿ ಚೈತ್ರಕೆ ಪ್ರಕೃತಿ ಸುಂದರಿಯು ವಸುಮತಿ
ನವ ವಧುವಿನಂತೆ ಶೃಂಗಾರವಾಗಿ...
ಋತು ವಸಂತನು ಬಂದ  ವರನ ಶೃಂಗಾರದಲಿ
ವಸುಮತಿಗೆ ಪತಿಯಾಗಿ ಸಾಗಿಸಾಗಿ /

ಇಬ್ಬರೊಲವಿನ ಮಿಲನ ಸಾಕ್ಷಿಯೊ ಎಂಬಂತೆ ಚಿಗುರಿ 
ತರುಲತೆ  ಮೆಲ್ಲ ಕಾಯಿ  ಮಾಗೀ..
ಹಣ್ಣಾಗಿ ಸಿಹಿ ಹಂಚಿ ಸಂತಸವ ತಂದಿರಲು
ನಮನ ಲಕ್ಷ್ಮೀಪತಿಗೆ ಶಿರವ ಬಾಗೀ...../



ಕರಾಡ ವಿಶ್ವ 3.0 ಆವೃತ್ತಿ

🪻🪻🪻

ಕರಾಡ ವಿಶ್ವದ   ಮೂರರ ಆವೃತ್ತಿ
ಹೊಸ ವರುಷಕೆ ಇದು ಶುಭಾರಂಭ 
ನವ ಯುವಕರು ನವ ಯುವತಿಯರಿಗೆ
ಇದು ರೀಲ್ಸ್ ಮಾಡಲು ಇಹ ಸುಸಂದರ್ಭ 

ವಯಸಿನ ಇತಿಮಿತಿ ಇಲ್ಲದೆ ಎಲ್ಲರು
ಬಳಸಲು ಇರುವಾ ಅವಕಾಶ 
ಧರಿಸಲು ಬಹುದೂ ಪ್ರತಿಭೆಯ ಹಂಚಲು
ಹಲವಿಧ, ವರ್ಣದ ಹಲವೇಶ 
Creative Writings
ಯುಗಾದಿ ಕವಿತೆಗಳು