
Article · October 9, 2026
ಚುಟುಕುಗಳು
By ರಾಧಾಕೃಷ್ಣ ಭಟ್ ಕುರುಮುಜ್ಜಿ
ರಾಧಾಕೃಷ್ಣ ಭಟ್ ಕುರುಮುಜ್ಜಿ
೧-ತಿಥಿಯಂದು ಮಹಾಲಯ ಬಡಿಸದಿದ್ದರೆ ಸಮಸ್ಯೆಗೆ ಪರಿಹಾರ ೨-ಪಿತೃಪಕ್ಷ ಮುಗಿದಾಗ ಮುಂದೆ ದೇವಿಯ ಆರಾಧನೆಯ ನವರಾತ್ರಿ ಸಂಭ್ರಮದ ಮಾತೃಪಕ್ಷ ೩ ರಾಜಕೀಯದ ಜ್ಯೂಸ್ ನ್ಯೂಸ್
ಪರಿಹಾರ------?
ಗತಿಸಿದ ಹಿರಿಯರ ತಿಥಿಯಂದು
ಮಹಾಲಯ ಬಡಿಸದಿದ್ದರೆ ಅಂದು
ಆಗುವುದಿಲ್ಲ ಅದೊಂದು ಸಮಸ್ಯೆ
ಕಾರಣ ಉಂಟಲ್ಲ ಕೊನೆಗೆ ಇದಕ್ಕೆಂದು
ಅದೇ ಹೆಸರಿನ ಮಹಾಲಯ ಅಮಾವಾಸ್ಯೆ
ಪಿತೃಪಕ್ಷ---ಮಾತೃಪಕ್ಷ
ಮುಗಿದಾಗ ಮಹಾಲಯ
ಮುಂದೆ ನವರಾತ್ರಿಯ ಸಮಯ
ಮಂಗಳ ಹಾಡಿದಾಗ ಪಿತೃಪಕ್ಷ
ಆಶ್ವಯುಜ ಬರುವಾಗ ಮಾತೃಪಕ್ಷ
ಜ್ಯೂಸ್-ನ್ಯೂಸ್
ರಾಹುಲಣ್ಣ ತಂಗಿ ಪ್ರಿಯಾಂಕಾಗೆ
ಕೊಟ್ಟಾಗ ಕುಡಿಯಲು ಜ್ಯೂಸ್
ಪ್ರೀತಿಯ ತಂಗಿ ಅತ್ತಿತ್ತ ನೋಡುತ್ತಿದ್ದರು
ವಿಪಕ್ಷದವರ ಠೀಕೆ ಒಡಹುಟ್ಟಿದ ತಂಗಿಗೇ
ಅಣ್ಣನಲ್ಲಿ ನಂಬಿಕೆ ಇಲ್ಲದೆ ಆದದ್ದೇಕೆ
ಹೀಗೆ ಆದದ್ದಕ್ಕೆ ವೈರಲ್ ಆದದ್ದು ನ್ಯೂಸ್
Creative Writings
