
Event · May 5, 2026
ಕರಾಡ ವಿಶ್ವ ವೆಬಿನಾರ್ ಸರಣಿ -37
09/05/2026ರ ಶನಿವಾರ ಸಂಜೆ 7.30ಕ್ಕೆ
ಈ ಸರಣಿ ಕಾರ್ಯಕ್ರಮದ ಅಂಗವಾಗಿ 09/05/2026ರ ಶನಿವಾರ ಸಂಜೆ 7.30ಕ್ಕೆ "ಕೃತಕ ಬುದ್ದಿಮತ್ತೆ (AI) - ನಿನ್ನೆ, ಇಂದು, ನಾಳೆ...! " ಎನ್ನುವ ಪ್ರಚಲಿತ ವಿಷಯದ ಕುರಿತು ಶ್ರೀಯುತ ಪ್ರಮೋದ್ ಭಟ್ ಕಯಂಪಾಡಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/ykz-gpuu-tfj
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ ಕಯಂಪಾಡಿ ಸೀತಾರಾಮ ಭಟ್ – ರಾಧಾ ಭಟ್ ದಂಪತಿಯ ಮಗನಾಗಿ 23-07-1977ರಂದು ಜನನ.
★ ಪ್ರಾಥಮಿಕ ಶಿಕ್ಷಣ ಮುಳ್ಳೇರಿಯಾ ಶಾಲೆಗಳಲ್ಲಿ.
★ ಪಿಯುಸಿ - ಭುವನೇಂದ್ರ ಕಾಲೇಜು, ಕಾರ್ಕಳ.
★ NMAMIT ನಿಟ್ಟೆ ಕಾಲೇಜಿನಲ್ಲಿ E & C ಯಲ್ಲಿ ಇಂಜಿನಿಯರಿಂಗ್ ಪದವಿ.
★ ಸಾಫ್ಟ್‌ವೇರ್ ಕಂಪೆನಿಗಳಲ್ಲಿ 27+ ವರ್ಷಗಳ ಸುದೀರ್ಘ ವೃತ್ತಿ ಅನುಭವ.
★ 1998ರಲ್ಲಿ ಬೆಂಗಳೂರಿನ PRDC ಸಂಸ್ಥೆಯಲ್ಲಿ R&D ಇಂಜಿನಿಯರ್ ಆಗಿ ವೃತ್ತಿ ಜೀವನದ ಆರಂಭ.
★ 2000ದಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ 'ಸಾಫ್ಟ್‌ವೇರ್ ಇಂಜಿನಿಯರ್_ ಆಗಿ ಸೇರ್ಪಡೆ. ಸುಮಾರು 18 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ. Embedded System ಗ್ರೂಪ್‌ನ ಡೈರೆಕ್ಟರ್ ಆಗಿ ಹಲವು ಹೊಸ Product Development ಯೋಜನೆಗಳು ಇವರ ನೇತೃತ್ವದಲ್ಲಿ ನಡೆದಿವೆ.
★ 2018ರಲ್ಲಿ Quest Global Engineering Service ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇರ್ಪಡೆ. ಪ್ರಸ್ತುತ Associate VP, Head of Global Software & Digital Practice ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
★ 2016ರ ಇನ್ಫೋಸಿಸ್‌ನ ಇಂಜಿನಿಯರಿಂಗ್ ಲೀಡರ್ ಪ್ರಶಸ್ತಿ , 2023 Quest Globalನ ಗ್ಲೋಬಲ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿ.
★ದೇಶ-ವಿದೇಶಗಲ್ಲಿ ಸಂಚರಿಸಿ, ಪ್ರತಿಷ್ಠಿತ ಕಂಪೆನಿಗಳ ಜೊತೆ ವ್ಯವಹಾರ ನಡೆಸಿದ ಅನುಭವ.
★ ಮಡದಿ ಶ್ರೀಮತಿ ಅಕ್ಷತಾ ಭಟ್, ಮಕ್ಕಳಾದ ಕು. ಸುಪ್ತಾ ಭಟ್ (II PUC), ಕು. ಸಮಿಧಾ ಭಟ್ (8ನೆಯ ತರಗತಿ) ಜೊತೆ ಬೆಂಗಳೂರಿನಲ್ಲಿ ವಾಸ.
★ ಕ್ರೀಡಾಸಕ್ತ, ಸಣ್ಣ ಕವಿ, ಹಸನ್ಮುಖಿ, ಉತ್ತಮ ದಾನಿ.
Webinar
