Karada Vishwa

Article · February 17, 2026

ಚೆಲುವೆ

ಕವಯಿತ್ರಿ : ಸಂಧ್ಯಾ ಕೊರೆಕ್ಕಾನ

ಕೆಂದಾವರೆಯ ಸೊಬಗಂತೆ ಕಂಗೊಳಿಸೊ ಚೆಲುವೆ
ಕಂಡಾಗ ಬಯಸಿತದು ಆ ನಿನ್ನ ಒಲವೆ
ಖುಷಿಯಲ್ಲಿ ಓಡಾಡೊ ಅಂದದಾ ಚಿಗರೆ
ನಿನ್ನ ನೋಟವನೊಮ್ಮೆ ನನ್ನತ್ತ ಬೀರೆ

ಬಳುಕುವ ಲತೆಯಲ್ಲಿ ಅರಳಿದ ಸುಮವೆ 
ಮುಂಗುರುಳು ಹಣೆಯಲ್ಲಿ ಚಂದದರಗಿಣಿಯೆ
ಮಗದೊಮ್ಮೆ ಮಗದೊಮ್ಮೆ ನೋಡುವಾ ಅಂದ 
ತೆಗೆಯಲಾರೆನು ಕಣ್ಣ ನಿನ್ನ ಮೇಲಿಂದ 

ಆ ರೂಪ ಲಾವಣ್ಯ ಚಂದಿರನ ಮೊಗವು
ನಗುವೊಂದ ಬೀರಿದರೆ ಅದು ನನ್ನ ಗೆಲುವು 
ನಿನ್ನಲ್ಲೆ ತುಂಬಿಹುದು ಅಪ್ಸರೆಯ ಚೆಲುವು
ನಿನ ಸಂಗ ಮಾಡಲಿಕೆ ಹಾತೊರೆವ ಮನವು 

ನಿನ್ನ ಸೆಳೆಯುವ ದಾರಿ ಏನಿಹುದು ಮುಗುದೆ
ನಿನ್ನ ಕಣ್ಣುಗಳೇನು ನನ್ನತ್ತ ಬರದೆ
ಮನಸಿನಲಿ ಚಿಂತೆ ನೀನೀಗ ನಗದೆ 
ನನ್ನಲ್ಲಿ ಉಳಿಯುವುದು ಕನಸದುವು ಬರಿದೆ 


Creative Writings
ಚೆಲುವೆ