Karada Vishwa

Article · June 17, 2026

ಚುಟುಕುಗಳು

✍️ ದಿವ್ಯಾ ಶಿರಂತಡ್ಕ

ಗೂಗಲ್ ಪೇ 

ಪ್ರಿಯತಮೆಯ ಜೊತೆ ಹೊರ ಹೋದರೆ
ಅವನ ಮುಖ ಯಾವಾಗಲೂ ಸಪ್ಪೆ...
ಕಾರಣ ಅವಳು  ಹೇಳುತ್ತಲೇ ಇರುವಳು
 ಯೂ ಪೇ.......ಗೂಗಲ್ ಪೇ...

ಸ್ತ್ರೀ - ಇಸ್ತ್ರಿ 

ಕೈ ಹಿಡಿದು ಮನ ಸೆಳೆದು 
ಮನೆ ತುಂಬಿದಳು ಸ್ತ್ರೀ
ನಿತ್ಯ ಅವಳ ಬಟ್ಟೆಗೂ 
ಈಗ ಹಾಕಬೇಕಿದೆ ಇಸ್ತ್ರಿ ..

ಪ್ರೀತಿಯ ಆಳ 

ಆತನಂದ, ಪ್ರಿಯೇ..
ತೋರಲೆ ಪ್ರೀತಿಯ ಆಳವನ್ನು
ಹನುಮಂತನಂತೆ ಹೃದಯ ಬಗೆದು?!
ಆಕೆಯಂದಳು..
ಅಷ್ಟೆಲ್ಲ  ಪಡದಿರಿ ಕಷ್ಟ 
ತೋರಿ ನಿಮ್ಮ ಪ್ರೀತಿಯನು
ನಿತ್ಯವೂ ಬಟ್ಟೆ ಒಗೆದು..
Creative Writings