Karada Vishwa

News · March 9, 2026

ಕರಾಡ ಸಮುದಾಯಕ್ಕೆ ಮತ್ತೊಂದು ಸಾಧನೆಯ ಗರಿ - ವರೇಣ್ಯಾ

ಮಂಗಳೂರು ವಿಶ್ವವಿದ್ಯಾನಿಲಯದ ಗಣಿತ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2024–25ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ (M.Sc. ಗಣಿತ) ಪ್ರಥಮ ರಾಂಕ್  ಗಳಿಸುವ ಮೂಲಕ ಕು. ವರೇಣ್ಯ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪಡ್ರೆ ನಿವಾಸಿಗಳಾದ ಬಾಲಚಂದ್ರ ಭಟ್ ಮತ್ತು ಪ್ರಿಯಾ ದಂಪತಿಗಳ ಪ್ರಥಮ ಪುತ್ರಿಯಾಗಿರುವ ವರೇಣ್ಯ ಅವರ ಈ ಸಾಧನೆ ಕರಾಡ ಸಮುದಾಯಕ್ಕೆ ಹೆಮ್ಮೆ ತರುವಂತದ್ದಾಗಿದೆ.

ಅವರ ಈ ಶೈಕ್ಷಣಿಕ ಸಾಧನೆಗೆ ಕರಾಡ ವಿಶ್ವದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು. 

Women