
Article · June 19, 2026
ಭತ್ತದೊಳಕ್ಕಿ.......
✍🏻ಜಯಶ್ರೀ ಕೆ ಆರ್ ಭಟ್ ಪಳ್ಳತ್ತಡ್ಕ
ಭತ್ತದೊಳಕ್ಕಿಯ ಇರಿಸಿದ ದೇವರು,
ಬಿತ್ತಿದರೇ ಬೆಳೆ ಬರಲೆಂದೂ.../
ಬಂದಿಹ ಬೆಳೆಯಾ ಬೇಯಿಸಿ ತಿಂದರೆ
ಅನ್ನವು ಸಕಲರಿಗಿರಲೆಂದೂ..../
ಬಿತ್ತಿದ ಕಾಳೂ ಚಿಗುರಿತು, ಬೆಳೆಯಿತು,
ಸೊಕ್ಕಿತು ಹಸಿರೂ ಚೆಲುವುಕ್ಕೀ....../
ಬೆಳೆದಿಹ ಚಿಗುರೂ, ತೆನೆಗಳ ತಿನ್ನಲು,
ನುಗ್ಗಿತು ಇಲಿ, ಹೆಗ್ಗಣ, ಹಕ್ಕೀ...../
ರೈತನು ಜಾಣ, ಬಂದ ನಿಧಾನ
ಬಲೆಯನು -ಹರಡಿದ ಕಾಳಿಕ್ಕೀ..../
ಸಂಚನು ಅರಿಯದೆ ಬಂದಿತು ಹಕ್ಕೀ..
ನರಳಿತು ಬಲೆಯೊಳು ತಾ ಸಿಕ್ಕೀ.../
ಇಲಿಯನು ಕರೆದೂ ಹಕ್ಕಿಯು ಹೇಳಿತು,
ಬಿಡಿಸೆನ್ನನು ನೀ ದಯೆಯುಕ್ಕೀ.../
ಕರುಣೆಯ ತೋರೀ ಬಿಡಿಸಿತು ಇಲಿ,ಬಲೆ...
ಇಬ್ಬರಲೂ ಗೆಳೆತನವುಕ್ಕೀ..../.
ಒಂದೆಡೆ ಸೇರಿ ಇಲಿ, ಹೆಗ್ಗಣ, ಕೈ
ಜೋಡಿಸಿತೂ ತಾನೂ ಹಕ್ಕೀ...../
ಬೆಳೆದಿಹ ಬೆಳೆ, ತೆನೆ, ಕಾಳೊಂದುಳಿಸದೆ,
ತಿಂದ್ಹಾಕಿತು ಎಲ್ಲವ ಮುಕ್ಕೀ..../
ಅಳುತಿದ್ದನು ರೈತನು ಬಿಕ್ಕೀ
ಕಣ್ಣೀರಿಳಿಯಿತು ಕೆನ್ನೆಯ ಮುತ್ತಿಕ್ಕೀ..../
☘️☘️☘️☘️
Creative Writings
