
News · March 2, 2026
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶಕ್ಕೆ ಕರಾಡ ಬ್ರಾಹ್ಮಣ ಸಂಘದ ದೇಣಿಗೆ
ಒಂದು ದಿನದ ಅನ್ನದಾನಕ್ಕೆ ತಗಲುವ ಖರ್ಚನ್ನು ಕರಾಡ ಬ್ರಾಹ್ಮಣ ಸಮುದಾಯದ ಪ್ರಾಯೋಜಕತ್ವದಲ್ಲಿ ಭರಿಸಲು ತೀರ್ಮಾನಿಸಲಾಯಿತು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿಯ ಬ್ರಹ್ಮ ಕಲಶದ ಸಂದರ್ಭದಲ್ಲಿ ನಮ್ಮ ಬ್ರಾಹ್ಮಣ ಸಮುದಾಯದ ಆರು ಗುಂಪುಗಳನ್ನು ಸೇರ್ಪಡೆಗೊಳಿಸಿ ರಚಿಸಲ್ಪಟ್ಟ ವೈದಿಕ ಅನುಷ್ಠಾನ ಸಮಿತಿಯ ಆಶಯದಂತೆ ಬ್ರಾಹ್ಮಣ ಭೋಜನಕ್ಕೆ ತಗಲುವ ಒಂದೊಂದು ದಿವಸದ ಅಂದಾಜು ಖರ್ಚನ್ನು ಒಂದೊಂದು ಪಂಗಡದವರ ಪ್ರಾಯೋಜಕತ್ವದಲ್ಲಿ ನಡೆಸುವುದು ಎಂದು ತೀರ್ಮಾನಿಸಲಾಯಿತು. ಇದಕ್ಕೆ ಸಂತೋಷವಾಗಿ ಒಪ್ಪಿಕೊಂಡ ನಮ್ಮ ಕರಾಡ ಬ್ರಾಹ್ಮಣ ಸಮಾಜದಿಂದ ಸಂಗ್ರಹಿಸಿದ ರೂಪಾಯಿ ಒಂದು ಲಕ್ಷವನ್ನು ದೇವಳದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡವಟ್ನಾಯ ಇವರೀಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಸಮಿತಿಯ ಹೆಚ್ಚಿನ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.
