Karada Vishwa

Article · October 17, 2026

ರಾತ್ರಿ ಬಂದಿಹುದು ನವರಾತ್ರಿ ಬಂದಿಹುದು

By ರಾಧಾಕೃಷ್ಣ ಭಟ್;ಕುರುಮುಜ್ಜಿ

ರಾಧಾಕೃಷ್ಣ ಭಟ್ ಕುರುಮುಜ್ಜಿ

ನವರಾತ್ರಿ ಶೋಡಷ ಪೂಜೋಪಚಾರ ವರ್ಣನೆ ಧಾಟಿ-ವಾರಬಂತಮ್ಮ ಗುರುವಾರ ಸೀತಮ್ಮ

ರಾತ್ರಿ ಬಂದಿಹುದು ನವರಾತ್ರಿ ಬಂದಿಹುದು !ಪಲ್ಲವಿ!

ಹರುಷವ ತಂದಿಹುದು ನವ‌ ವರುಷವತಂದಿಹುದು!
ನವವರುಷದಲಿ ನವಹರುಷದಲಿ ಇರುತಿಹ ಸಮಯವಿದು!ಅನುಪ!

ಹೂಗಳ ಪೂಜೆ ಇದು ತಾಯಿಗೆ ಹೂಗಳ ಪೂಜೆ ಇದು
ಮಲ್ಲಿಗೆ ಜಾಜಿ ಸೇವಂತಿಯ ಹೂಗಳ ಪೂಜೆ ಇದು. !ಪಲ್ಲವಿ!

ಕುಂಕುಮ ಪೂಜೆ ಇದು ದೇವಿಗೆ ಕುಂಕುಮ ಪೂಜೆ ಇದು
ಕುಂಕುಮಾಂಕಿತೆ ಪಂಕಜನೇತ್ರೆಗೆ ಕುಂಕುಮ ಪೂಜೆ ಇದು!!ಪಲ್ಲವಿ!

ಅಭಿಷೇಕ ಪೂಜೆಇದು ದುರ್ಗೆಗೆ ಅಭಿಷೇಕ ಪೂಜೆ ಇದು
ಅಭೀಷ್ಠ ನೀಡುವ ಅಧಿನಾಯಕಿಗೆ ಅಭೀಷ್ಠ ಪೂಜೆ ಇದು. !ಪಲ್ಲವಿ!

ಚಂದನ ಪೂಜೆ ಇದು ಮಾಯೆಗೆ ಚಂದನ ಪೂಜೆ ಇದು
ಚಂದ್ರನ ಕಾಂತಿಯ ಹೊಳಪಿನ ಶಕ್ತಿಗೆ ಚಂದನ ಪೂಜೆ ಇದು !ಪಲ್ಲವಿ!

ಭಜನಾಸೇವೆ ಇದು ಭಕ್ತರ ಭಜನಾಸೇವೆ ಇದು
ಭಜನಾಸೇವೆಯು ಭಗವತಿಗರ್ಪೀತ ಭಜಕರ ಭಾಗ್ಯವಿದು !ಪಲ್ಲವಿ!






Creative Writings