Karada Vishwa

News · April 30, 2026

ಆದಿತ್ಯ ಭಾರದ್ವಾಜ್ ಅವರಿಗೆ ಅಭಿನಂದನೆಗಳು

ಐಐಎಂ ಕೋಝಿಕ್ಕೋಡ್ ನಲ್ಲಿ ತಮ್ಮ ಮಾಸ್ಟರ್ಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಆದಿತ್ಯ ಅವರು, ಇತ್ತೀಚೆಗೆ ಐಐಎಂ ಕೋಝಿಕ್ಕೋಡ್ ನಲ್ಲಿ ತಮ್ಮ ಮಾಸ್ಟರ್ಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮೊದಲನೇ ವರ್ಷದ ಡೀನ್ಸ್ ಮೆರಿಟ್ ಲಿಸ್ಟ್‌ನಲ್ಲಿ (ಟಾಪ್ 5%) ಸ್ಥಾನ ಪಡೆದುದು ಹಾಗೂ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿರುವುದು ಅವರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ತೋರಿಸುತ್ತದೆ.

ಆದಿತ್ಯ ಅವರು ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದು, MBA ಪ್ರವೇಶ ಪರೀಕ್ಷೆಯಲ್ಲೂ ಮೊದಲ ಪ್ರಯತ್ನದಲ್ಲೇ ಉತ್ತೀರ್ಣತೆಯನ್ನು ಸಾಧಿಸಿರುವುದು ಅವರ ಅಸಾಧಾರಣ ಶ್ರಮ ಮತ್ತು ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಮ್ಮ ಕರಾಡ ಸಮುದಾಯದಿಂದ CA ಹಾಗೂ ಐಐಎಂ- MBA ಎರಡನ್ನೂ ಸಾಧಿಸಿದ ಮೊದಲ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ವಿಶೇಷವಾಗಿ ಗಮನಾರ್ಹವಾದ ವಿಚಾರ. 

ಶ್ರೀ ನಾಗರಾಜ ಉಪ್ಪಂಗಳ ಮತ್ತು ಶ್ರೀಮತಿ ಆಶಾ ಉಪ್ಪಂಗಳ ಅವರ ಪುತ್ರರಾದ ಆದಿತ್ಯ ಭಾರದ್ವಾಜ್ ಎಳವೆಯಿಂದಲೇ ಅಪೂರ್ವ ಪ್ರತಿಭಾವಂತರು.
ಆದಿತ್ಯ ಅವರಿಗೆ ಕರಾಡ ವಿಶ್ವದ ಅಭಿನಂದನೆಗಳು ಹಾಗೂ ಮುಂದಿನ ಜೀವನದಲ್ಲಿ ಇನ್ನಷ್ಟು ಯಶಸ್ಸು ದೊರಕಲಿ ಎಂದು ಹಾರೈಕೆಗಳು. 💐

AchieversEducation
ಆದಿತ್ಯ ಭಾರದ್ವಾಜ್ ಅವರಿಗೆ ಅಭಿನಂದನೆಗಳು