Karada Vishwa

Article · April 11, 2026

ಅವನೆಂದರೆ.....

ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

☘️☘️☘️☘️
ಅವನೆಂದರೆ ಹಾಗೇ....
ಒಮ್ಮೆ ನಗುವ,
ಒಮ್ಮೆ ನಗಿಸುವ,
ಒಮ್ಮೆ ಕೋಪಗೊಳ್ಳುವ,
ಒಮ್ಮೆ ಒಲವ ತೋರುವ,
ಒಮ್ಮೊಮ್ಮೆ ನೊಂದುಕೊಳ್ಳುವ,
ಕೆಲವೊಮ್ಮೆ ಕಣ್ಣೀರು ಬರಿಸುವ,
ಒಮ್ಮೊಮ್ಮೆ ಕಣ್ಣೊರೆಸುವ
ಕೆಲವೊಮ್ಮೆ ಕೋಪದಲ್ಲಿ ಹಾರಾಡುವ
ಕಾರಣ -
ಅವನೊಬ್ಬ 'ಕಲಾವಿದ'..
Creative Writings
ಅವನೆಂದರೆ.....