Karada Vishwa

News · August 27, 2026

ಚೇರ್ಕಬೆ ಕ್ಷೇತ್ರದಲ್ಲಿ ಋಗುಪಾಕರ್ಮ ಸಂಪನ್ನ

ವರದಿ : ಚಂದ್ರಶೇಖರ ಭಟ್ ಕೋಟೆ

ಚೇರ್ಕಬೆ ಕ್ಷೇತ್ರದಲ್ಲಿ ನಿನ್ನೆ ಋಗುಪಾಕರ್ಮವು ಭಕ್ತಿಭಾವದಿಂದ ನೆರವೇರಿತು. ವೈದಿಕರಾದ ಶ್ರೀ ನಾರಾಯಣ ಭಟ್ಟ, ಶ್ರೀನಿವಾಸ ಪ್ರಸಾದ ಭಟ್ಟ, ಶ್ರೀ ಮಾಧವ ಭಟ್ಟ ಹಾಗೂ ಶ್ರೀ ರಾಧಾಕೃಷ್ಣ ಭಟ್ಟ ಅವರ ನೇತೃತ್ವದಲ್ಲಿ ವಿಧಿವಿಧಾನಗಳು ನೆರವೇರಿದವು.

ಕಾರ್ಯಕ್ರಮದಲ್ಲಿ ಸುಮಾರು ೨೫ ಮಂದಿ ಸಮಾಜ ಬಾಂಧವರು ಭಾಗವಹಿಸಿ, ಉಪಾಕರ್ಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಸಮಾಜ ಬಾಂಧವರ ಉಪಸ್ಥಿತಿ ಹಾಗೂ ಸಹಕಾರದಿಂದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

CommunityHeritage
ಚೇರ್ಕಬೆ ಕ್ಷೇತ್ರದಲ್ಲಿ ಋಗುಪಾಕರ್ಮ ಸಂಪನ್ನ