Karada Vishwa

Article · September 11, 2026

ಕಣ್ಣ ದೃಷ್ಟಿಯ ಲೆಕ್ಕ .

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಇತ್ತೀಚಿನ ದಿನಗಳಲ್ಲಿ ಹೀಗೆಯೂ ನಡೆಯಬಹುದು, ಯಾರನ್ನು ನಂಬುವಂತಿಲ್ಲ. ಕೆಲವುಜನರು ಆ ರೀತಿ ನಡೆದುಕ್ಕೊಳ್ಳುತ್ತಾರೆ.

ಪಾತ್ರೆ ಪಗಡಿ ಮಾರಿಕೊಂಡು
ಬಂದಳವಳು ಹೆಣ್ಣು/
ಮನೆಯ ಒಳಗೆ ದೃಷ್ಟಿ ಹರಿಸುತಿತ್ತು
ಅವಳ ಕಣ್ಣು /

ಮನೆಯ ಒಳಗೆ ಯಾರು ಇಹರು?
ಕಣ್ಣಿನಲ್ಲೆ ಲೆಕ್ಕ
ಕಡಿಮೆ ಮಂದಿ ಇದ್ದರಲ್ಲಿ
ಕಳ್ಳತನವು ಪಕ್ಕಾ /

ಹರಿಸಿ ಕಣ್ಣ ದೃಷ್ಟಿ
ಬರಲುಬಹುದೆ ಗೇಟು ಹಾರಿ ?
ಬರುವಳೇನೋ ರಾತ್ರಿಗೇನೆ
ನಾಲ್ಕು ಜನರ ಸೇರಿ/

ಸಿಗಲುಬಹುದೆ ಮನೆಯ ಒಳಗೆ
ಇರುವ ತಿಜೋರಿ /
ಬಾಳಬಹುದು ಕಷ್ಟಪಡದೆ
ಚಿನ್ನವೆಲ್ಲ ಮಾರಿ/

ಕಳ್ಳತನದ ಲೆಕ್ಕವಂತು
ಮಾಡಿಹಳು ಪಕ್ಕಾ /
ಮನೆಯ ಬಾಗಿಲನ್ನು ಭದ್ರ
ಪಡಿಸಿಕೊಳ್ಳಿ ಅಕ್ಕಾ !



Creative Writings