
News · October 22, 2025
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ, ಪೆರ್ಲ ಶ್ರೀ ಶಂಕರ ಸೇವಾ ಸಮಿತಿ ನೂತನ ಆಡಳಿತ ಕಚೇರಿ ಉದ್ಘಾಟನೆ
ವರದಿ - ದಿವ್ಯಾ ಬಿ ಶಿರಂತಡ್ಕ
ಪೆರ್ಲ : ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ, ಶ್ರೀ ಶಂಕರ ಸೇವಾ ಸಮಿತಿ ಪೆರ್ಲ, ಕರಾಡ ಸುವರ್ಣ ಸಂಭ್ರಮ ಸಮಿತಿ ಆಶ್ರಯದಲ್ಲಿ ರವಿವಾರ ಪೆರ್ಲದ ಶಂಕರ ಸದನದಲ್ಲಿ ಸಂಘದ ನೂತನ ಆಡಳಿತ ಕಚೇರಿಯ ಉದ್ಘಾಟನೆ ನಡೆಯಿತು.
ಬೆಳಗ್ಗೆ 11 ಗಂಟೆಗೆ ನಡೆದ ಸಮಾರಂಭದಲ್ಲಿ ಹಿರಿಯರಾದ ತಡೆಗಲ್ಲು ವಾಸುದೇವ ಭಟ್ ಅವರು ನೂತನ ಆಡಳಿತ ಕಚೇರಿ ಉದ್ಘಾಟಿಸಿದರು. ಶ್ರೀ ಶಂಕರ ಸದನ ಮತ್ತು ಭಾರತೀ ಸದನದಲ್ಲಿ ಅಳವಡಿಸಿದ ಸಿಸಿಟಿವಿ ಸೌಲಭ್ಯವನ್ನು ರಾಜಾರಾಮ ಪೆರ್ಲ ಉದ್ಘಾಟಿಸಿದರು. ಶಂಕರ ಕ್ರೀಡಾ ಸಮಿತಿ ವತಿಯಿಂದ ಅಳವಡಿಸಲಾದ ನೀರು ಶುದ್ಧೀಕರಣ ಯಂತ್ರದ ಉದ್ಘಾಟನೆಯನ್ನು ಅನಂತ ಭಟ್ ಪಡ್ಪು ನೆರವೇರಿಸಿದರು. ಕರಾಡ ಬ್ರಾಹ್ಮಣ ಅಭ್ಯುದಯ ಸಂಘವು ಐವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಶುಭ ಸಂದರ್ಭದಲ್ಲಿ 'ಕರಾಡ ಸುವರ್ಣ ಸಂಭ್ರಮ 2026' ಇದರ ವಿನಂತಿ ಪತ್ರವನ್ನು ಸುಧಾ. ಜಿ. ಭಟ್ ಬಿಡುಗಡೆಗೊಳಿಸಿದರು. ವೆಂಕಟಕೃಷ್ಣ ಎಡಮಲೆಯವರು ಸುವರ್ಣ ಸಂಭ್ರಮಕ್ಕೆ ಪ್ರಥಮ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು. ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷ ರಮಾನಂದ ಎಡಮಲೆ, ಕಾರ್ಯದರ್ಶಿ ಗಣೇಶ್ ಚೇರ್ಕೂಡ್ಲು, ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್ ಕಾಯರ್ಗದ್ದೆ, ಕರಾಡ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಎಡೆಪ್ಪಾಡಿ, ವೆಂಕಟೇಶ್ ಭಟ್ ಆಟಿಕುಕ್ಕೆ- ಬೆಂಗಳೂರು, ವೆಂಕಟಸುಬ್ಬರಾವ್ ಕೋಮ್ಮುಂಜೆ, ರಾಮಕೃಷ್ಣ ಭಟ್ ಕಜಂಪಾಡಿ, ಶ್ರೀಹರಿ ಭಟ್ ಸಜಂಗದ್ದೆ, ಶ್ರೀಧರ ಭಟ್ ಚೋಕೆಮೂಲೆ, ಕರಾಡ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾ ಎಡಮಲೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅದೇ ದಿನ ಕರಾಡ ಸಮ್ಮಿಲನದ ಪ್ರಯುಕ್ತ ಬೌದ್ಧಿಕ ಹಾಗೂ ಆಟದ ಸ್ಪರ್ಧೆಗಳು ನಡೆದು ಬಹುಮಾನಗಳನ್ನು ವಿತರಿಸಲಾಯಿತು.

