Karada Vishwa

Article · May 15, 2026

ಹೆಣ್ಣು

- ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ


ಹೆಣ್ಣು ಲೋಕಕೆ ಸ್ವಸ್ತಿ, 
ಹೆಣ್ಣು ಸಾತ್ವಿಕ ಶಕ್ತಿ,
ಹೆಣ್ಣು ಬಾಳಿನ ಕಣ್ಣು,
ಅವಳು ಹೆಣ್ಣು/

ಹೆಣ್ಣು ಭಾವದ ಬಂಧ,           
ಹೆಣ್ಣು ಹುಣ್ಣಿಮೆ ಅಂದ,          
ಹೆಣ್ಣು ಲೋಕಕೆ ಚಂದ,        
ಅವಳು ಹೆಣ್ಣು/

ಹೆಣ್ಣು ಕನಸಿಗೆ ಒಡತಿ,          
ಹೆಣ್ಣು ಮನಸಿನ ಗೆಳತಿ,      
ಇರಬೇಕು ಜಗದೊಳಗೆ
ಅವಳು ಹೆಣ್ಣು/

ಹೆಣ್ಣು ಭೂಮಿಗೆ ಹೊನ್ನು,      
ಹೆಣ್ಣು ಭೂಮಿಗೆ ಕಣ್ಣು,
ಹೆಣ್ಣು ಶಕ್ತಿ ಸ್ವರೂಪೆ 
ಅವಳು ಹೆಣ್ಣು/

ಹೆಣ್ಣು ಮಾತಿನ ಮಲ್ಲಿ,
ಹೆಣ್ಣು ಮನಸಿನ ಕಳ್ಳಿ,              
ದೇಹ ಹೂವಿನ ಬಳ್ಳಿ,           
ಅವಳು ಹೆಣ್ಣು/

ಹೆಣ್ಣು ಸೃಷ್ಟಿಯ ಮೂಲ
ಹೆಣ್ಣು ಮೋಹಕ ಜಾಲ,
ಕಾರಣವು ಹಲವಿಹವು
ಅವಳು ಹೆಣ್ಣು/

☘️☘️☘️☘️
Creative Writings
ಹೆಣ್ಣು