
Article · December 9, 2025
ಬಿಡಿಸು ಬಂಧನವ
ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ನಂದ ನಂದನ, ಬಿಡಿಸು ಬಂಧನ
ನಂದ ಕಂದ ಮುಕುಂದನೇ...
ಜ್ಞಾನವಾರಿಧೇ ಸ್ವಾಮಿ ಶ್ರೀನಿಧೇ
ನಿನ್ನನೆಂದಿಗು ನಂಬಿದೇ...
ಜಗವ ಕಾಯ್ವನೆ ವಾಸುದೇವನೆ,
ಆತ್ಮಜ್ಯೋತಿಯೆ ವಂದನೇ...
ಯಾವ ಕಾರಣಕೆಮಗೆ ಜನುಮವ
ನೀಡಿದೆಯೊ ನೀ ಈಶನೇ ....
ಆಟವಾಡಿಸಿ ಕರ್ಮ ಮಾಡಿಸಿ,
ಕರ್ಮಬಂಧದಿ ಬಿಗಿಯುವೇ...
ಸಾಕು ಮಾಡಯ್ಯ ಕರ್ಮಬಂಧನ
ಮುಕ್ತಿ ನೀಡೆಂದು ಬೇಡುವೇ...
ನೀನೆ ಬಂಧುವು ನೀನೇ ಸಿಂಧುವು
ನೀನೆ ಮುಂದು ಎಂದೆಂದಿಗೂ...
ಕಷ್ಟ ಕಾಲಕು ಇಷ್ಟ ಕಾಲಕು
ಒದಗಿ ಬರುವೆ ನೀನೆಂದಿಗೂ...
ಇಂದಿರಾಧವ ಆದಿಕೇಶವ,
ನಿನ್ನ ನಾಮವ ಸ್ಪರಿಸುವೇ....
ನಿತ್ಯ ನಾಮದ ಸ್ಮರಣೆ ಮಾಡುತ
ಪಾಪಗಳ ಕಳಕೊಳ್ಳುವೇ....
ಬಿಂದುಮಾಧವ ನೊಂದ ಜೀವವ
ಮತ್ತೆ ನೋಯಿಸಬೇಡವೋ...
ಮುಕ್ತಿ ನೀಡೂ ಪಾದಕಮಲದಿ
ಮತ್ತೆ ಬೇಡವು ಜನುಮವೂ..
ಕಿರುಪರಿಚಯ :
ಜಯಶ್ರೀ ಐಲುಕುಂಜೆ, ಪಳ್ಳತಡ್ಕ . ಪರಿಸರಪ್ರಿಯೆ . ಗೃಹಿಣಿ . ಮನಸಿಗನಿಸಿದ್ದನ್ನು ಚೊಕ್ಕವಾಗಿ ಪುಟಕ್ಕಿಳಿಸುವ ಹವ್ಯಾಸ. ಕರಾಡ ಭಾಷೆಯಲ್ಲಿ ಮತ್ತು ಕನ್ನಡದಲ್ಲಿ ಬರೆಯಬಲ್ಲರು.

Creative Writings
