
Event · June 10, 2026
ಕರಾಡ ವಿಶ್ವ ವೆಬಿನಾರ್ ಸರಣಿ -38
ದಿನಾಂಕ : 13/06/2026ರ ಶನಿವಾರ ಸಂಜೆ 7.30. ವಿಷಯ : ಭಾಗವತ ಮಹಾಪುರಾಣ ಮತ್ತು ಮೇಲ್ಪತ್ತೂರು ನಾರಾಯಣ ಭಟ್ಟತ್ತಿರಿ ವಿರಚಿತ ನಾರಾಯಣೀಯಂ
ಈ ಸರಣಿ ಕಾರ್ಯಕ್ರಮದ ಅಂಗವಾಗಿ 13/06/2026ರ ಶನಿವಾರ ಸಂಜೆ 7.30ಕ್ಕೆ ಭಾಗವತ ಮಹಾಪುರಾಣ ಮತ್ತು ಮೇಲ್ಪುತ್ತೂರು ನಾರಾಯಣ ಭಟ್ಟತ್ತಿರಿ ವಿರಚಿತ ನಾರಾಯಣೀಯಂ ಎನ್ನುವ ವಿಷಯದ ಕುರಿತು ಶ್ರೀಮತಿ ಶಕುಂತಳಾ ವಾಸುದೇವ ಭಟ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/ykz-gpuu-tfj
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ ಪಳ್ಳ ಶ್ರೀ ಗೋವಿಂದ ಭಟ್ - ಶ್ರೀಮತಿ ಭಾಗೀರಥಿ ದಂಪತಿಯ ಸುಪುತ್ರಿ. ಕನಿಯಾಲ ಮೇಲಿನಮೂಲೆ
ವಾಸುದೇವ ಭಟ್ಟರ ಧರ್ಮಪತ್ನಿ.
★ ಪ್ರಾಥಮಿಕ ವಿದ್ಯಾಭ್ಯಾಸ ತಂದೆಯವರು ಅಧ್ಯಾಪಕರಾಗಿದ್ದ ಮವ್ವಾರು ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸ ಅಗಲ್ಪಾಡಿ ಶಾಲೆಯಲ್ಲಿ.
★ ನಂತರ 'ರಾಷ್ಟ್ರ ಭಾಷಾ ಪ್ರವೀಣ' ಪದವಿ ಪೂರ್ಣಗೊಳಿಸಿ ಒಂದೂವರೆ ವರ್ಷ ಅಧ್ಯಾಪನ ವೃತ್ತಿ.
★ ತಂದೆ ಮತ್ತು ಪತಿಯಿಂದ ಸಿಕ್ಕ ಸಂಸ್ಕೃತ ಜ್ಞಾನದ ಜೊತೆಗೆ ಮದುವೆಯ ನಂತರ ಕಲಿತ ಮಲಯಾಳಂ ಭಾಷೆಯು ಮನೆಯ ಸಮೀಪವಿರುವ ಪಶ್ಚಿಮಾಭಿಮುಖವಾಗಿ ನಿಂತ 'ಶಿವ ಕ್ಷೇತ್ರ'ದಲ್ಲಿ ಸತ್ಸಂಗ ತಂಡ ಸೇರಲು ಕಾರಣವಾಯಿತು.
★ಪತಿ ಅದೇ ಶಿವ ಕ್ಷೇತ್ರದಲ್ಲಿ ಅರ್ಚಕರು. ದೇವರ ಅರ್ಚನೆಗಾಗಿ ಮನೆಯ ಸುತ್ತಮುತ್ತ ಹೂದೋಟನ್ನು ಮಾಡಿ, ಶಿವ ಕ್ಷೇತ್ರದಲ್ಲಿ ಶಾರೀರಿಕ ಹಾಗೂ ಸಾಂಪತ್ತಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರದ ಮಾತೃ ಸಮಿತಿಯ ವಿವಿಧ ಜವಾಬ್ದಾರಿ ಹೆಗಲಿಗೇರಿಸಿ ಸೇವೆ ಮುಂದುವರಿಯುತ್ತಿದೆ.
★ 'ನಾರಾಯಣೀಯಂ',
'ಸಹಸ್ರನಾಮಗಳು', 'ಭಾಗವತ', 'ರಾಮಾಯಣ' ಭಜನೆ ದಿನವೂ ಕಲಿಕೆ-ಕಲಿಸುವಿಕೆ.
★ ಯುವ ಭಜನಾ ತಂಡ ಕಟ್ಟಿ, ಹಲವೆಡೆ ಭಜನಾ ಸೇವೆ ಮಾಡುತ್ತಿದ್ದಾರೆ.
★ ಕೊರೋನಾ ಸಮಯದಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿ ಇದೀಗ 'ನಾರಾಯಣೀಯಂ', 'ಭಾಗವತ', 'ರಾಮಾಯಣ', 'ಶ್ರೀಪಾದ ಸಪ್ತತಿ' ತರಗತಿಗಳು ಇವರ ನೇತೃತ್ವದಲ್ಲಿ ನಡೆಯುತ್ತಿವೆ.
★ ಕೆಲವು ತಿಂಗಳುಗಳ ಹಿಂದೆ ಹುಟ್ಟಿಕೊಂಡ 'ಕಲಿಯೋಣ ಬನ್ನಿ' ವಾಟ್ಸಪ್ ಗುಂಪಿನಲ್ಲಿ 'ನಾರಾಯಣೀಯಂ' ಕಲಿಸಲು ಪ್ರಾರಂಭಿಸಿದರು. ಕಲಿತವರಿಗೆ ಅಭ್ಯಾಸವಾಗಲು ನಿರಂತರ ತರಗತಿಗಳೂ ನಡೆಯುತ್ತಿವೆ. ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಈ ಯೋಜನೆ-ಯೋಚನೆಯ ಹಿಂದಿನ ಶಕ್ತಿ ಶಕುಂತಲಾ ಭಟ್.
★ 'ನಾನು ಕಲಿತರೆ ಸಾಲದು, ಕಲಿತುದರಲ್ಲಿ ಅತ್ಯುತ್ತಮವಾದ ಒಂದಷ್ಟು ವಿಚಾರಗಳನ್ನು ಜನರಿಗೂ ತಲುಪಿಸಬೇಕು' ಎನ್ನುವ ಮಹದಾಸೆ ಇವರದ್ದು. ಶಕುಂತಲಾ ಭಟ್ ಅವರ ಪ್ರೇರಣೆಯಿಂದ ಹಲವಾರು ಮನೆಗಳಲ್ಲಿ 'ಭಾಗವತ', 'ನಾರಾಯಣೀಯಂ' ಮುಂತಾದ ಉತ್ಕೃಷ್ಟ ಪುಸ್ತಕಗಳು ಬಂದಿವೆ ಮತ್ತು ನಮ್ಮವರು ದಿನನಿತ್ಯ ಅವುಗಳನ್ನು ಅಭ್ಯಸಿಸುತ್ತಿದ್ದಾರೆ.
★ ಇಬ್ಬರು ಹೆಣ್ಣು ಮಕ್ಕಳು. ಒಬ್ಬರು ಕನ್ನಡಗುಳಿ ಸೊಸೆ, ಇನ್ನೊಬ್ಬರು ಖಂಡೇರಿ ಸೊಸೆ.
★ ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್‌ಕಾಡ್‌ನಲ್ಲಿ ವಾಸ.
★ ಮಿತಭಾಷಿ, ಕಂಚಿನ ಕಂಠ, ನಿಗರ್ವಿ, ಹಸನ್ಮುಖಿ.
