Karada Vishwa

Article · November 11, 2026

ಚುಟುಕುಗಳು

By ರಾಧಾಕೃಷ್ಣ ಭಟ್;ಕುರುಮುಜ್ಜಿ

ರಾಧಾಕೃಷ್ಣ ಭಟ್ ಕುರುಮುಜ್ಜಿ

ಒಳ್ಳೆಯದು!

ಕೆಲವು ಕಾರ್ಯಗಳಿಗೆ ನಿಷಿದ್ಧವದು
ಸಾಮಾನ್ಯವಾಗಿ ಭರಣಿ ಕೃತ್ತಿಕೆ
ಆದರೆ ಉಪ್ಪಿನಕಾಯಿಗೆ ಒಳ್ಳೆಯದು
ಭರಣಿಯೆ ಎನ್ನುವಳು ನೆರೆಮನೆಯ ಕೃತ್ತಿಕೆ

ವಾಸ್ತವ

ಹಗಲಲ್ಲಿ ಬಂದದ್ದು ಕೆಲವು ಮಂದಿ
ತೋಟದ ಅಗತೆಗೆ , ಭಾಷೆ ಅವರದ್ದು ಹಿಂದಿ
ಆದರೆ ರಾತ್ರೆಯ ಅಗತೆಯ ಕೆಲಸ ಓ-ಸೀಗೆ
ಸಂಬಳ ಕೊಡದೆ ದುಡಿದದ್ದು ಕೆಲವು ಹಂದಿ

ತ್ಯಾಗ?
ನಮಗಾಗಿ ಕಡಿದಾಗ ಬಾಳೆ ಗೊನೆ
ಅದರ ಬಾಳೇ ಆಗುವುದು ಆಗ ಕೊನೆ
ಪರೋಪಕಾರದ ತ್ಯಾಗಮನೋಭಾವ
ಅದಕ್ಕಾಗಿ ಸಮರ್ಪಣೆ ಅದರಜೀವ

ಹೇಳಬಹುದಿತ್ತು

ಅರ್ವತ್ತಕ್ಕೆ ಅರಳುಮರುಳು
ಎನ್ನುವುದೊಂದು ಗಾದೆಮಾತು
ಅರ್ವತ್ತರ ಪ್ರಾಯಕ್ಕೆ ರಿವರ್ಸ್ ಗೇರ್ ಇದ್ದರೆ
ಮೂವತ್ತಕ್ಕೇ ಮರಳು ಎನ್ನಬಹುದಿತ್ತು

ವ್ಯತ್ಯಾಸ?

ಸಾಮಾನ್ಯವಾಗಿ ಹೇಳುತ್ತಾರೆ
ಕಾಸಿದ್ರೆ‌ ಸಿಗುವುದು ಕೈಲಾಸ
ಕಾಸಿಲ್ಲದಿದ್ರೂ ಕೇಳುತ್ತಾರೆ
ಕೈ ಖಾಲಿಯಾಗಿ ನಿಮ್ಮ ಕೈ-ಲಾಸಾ?


Creative Writings