
Article · July 9, 2026
ಒಂದು ಸಂದರ್ಶನ... ಜೀವಮಾನವಿಡೀ ಉಳಿಯುವ ನೆನಪು
--ಸಿದ್ಧಿ ಎಸ್ ವಸಿಷ್ಠ.
The Bridge Man of India😔May his legacy live on.
ನಾಲ್ಕು ತಿಂಗಳ ಹಿಂದೆ ಇವರನ್ನು ಭೇಟಿ ಆಗಿದ್ದೆ. ಅದೇ ಮೊದಲ ಸಲ ಅವರನ್ನು ಭೇಟಿ ಆಗಿದ್ದು. ಅದು ಕೂಡ ಅಷ್ಟು ಹತ್ತಿರದಿಂದ. ಡಾ. ಗಿರೀಶ್ ಭಾರದ್ವಾಜ್ ಅವರನ್ನು ಸಂದರ್ಶನ ಮಾಡಬೇಕು ಅಂದಾಗ ತುಂಬಾ ಭಯವಿತ್ತು. ಇಂತಹ ಮಹಾನ್ ವ್ಯಕ್ತಿಯನ್ನು ನಾನು ಸಂದರ್ಶನ ಮಾಡೋದು ಅಂದ್ರೆ ಏನು ಅನ್ನುವ ಭಯವಿತ್ತು. ಆದರೆ ಅವರ ಸರಳತೆ, ತಾಳ್ಮೆ, ಅವರ ಜೊತೆ ಕಳೆದ ಅಷ್ಟೂ ಸಮಯ, ಎಲ್ಲವೂ ನೆನಪಲ್ಲೇ ಉಳಿಯುವಂತದ್ದು..
ಅವರಿಂದ ನನ್ನಂಥವರು ಕಲಿಯೋದು ತುಂಬಾನೆ ಇತ್ತು. ಆ ದಿನ ಅವರ ತಮ್ಮನ ಮನೆಯಲ್ಲಿ, ಅವರ ತಮ್ಮನ ಸಂದರ್ಶನ ಕೂಡ ಇತ್ತು. ಇಬ್ಬರ ಸಂದರ್ಶನ ಕೂಡ ಅದೇ ಮನೆಯಲ್ಲಿ ಪ್ಲಾನ್ ಆಗಿತ್ತು. ಅವರ ತಮ್ಮನ ಸಂದರ್ಶನ ಮುಗಿಸಿ ಗಿರೀಶ್ ಭಾರದ್ವಾಜ್ ಅವರ ಸಂದರ್ಶನ ಅಂತ ಮೊದಲೇ ಹೇಳಿದ್ದೆವು ಆದರೂ ಅವರು ಮಾತ್ರ ಬೇಗನೆ ಬಂದು ಕೂತಿದ್ದರು. ಅವರು ಆಗಮಿಸಿರುವ ಸಮಯದಲ್ಲಿ ಅವರ ತಮ್ಮನ ಸಂದರ್ಶನ ಶುರುವಾಗಿತ್ತು ಅಷ್ಟೇ.. ಆದರೂ ಸಹ ತಮ್ಮನ ಸಂದರ್ಶನ ಮುಗಿಯುವರೆಗೂ, ಅಷ್ಟೊತ್ತು ಗಿರೀಶ್ ಭಾರದ್ವಾಜ್ ಅವರು ತಾಳ್ಮೆಯಿಂದ ಕಾಯುತ್ತಿದ್ದ ರೀತಿ ನನಗೆ ಈಗಲೂ ಕಣ್ಣ ಮುಂದೆ ಬಂದು ನಿಂತಿದೆ. ಪಾಪ ಅವರು News paper ಓದುತ್ತಾ ಕೂತರು. ಕಷಾಯ ಕುಡಿಯುತ್ತಾ ಕೂತಿದ್ದ ಅವರ ಹತ್ತಿರ ಹೋಗಿ ನಾನು ವಿಡಿಯೋ ಕ್ಲಿಕ್ ಮಾಡೋದನ್ನ ಗಮನಿಸಿದ ಅವರು "ವಿಡಿಯೋ ಮಾಡ್ತಾ ಇದ್ದೀರಾ" ಅಂತ ನಗುತ್ತಾ ಕೇಳಿದ್ರು. ನಂತರ ಅವರ ಸಂದರ್ಶನ ಶುರು ಮಾಡೋಕೆ ಅಲ್ಲೇ ಸ್ಥಳ ನೋಡ್ತಾ ಇದ್ದೆವು. ಅವರೂ ನಮ್ಮ ಜೊತೆ ಆಕಡೆ ಈಕಡೆ ಅಂತ ಬಂದ್ರು. ಹಾಗೆ ಮೂರು- ನಾಲ್ಕು ಸ್ಥಳ ನೋಡಿ ಕೊನೆಗೆ ಒಂದು ರೂಮ್ ನಲ್ಲಿ ಸಂದರ್ಶನ ಶುರು ಮಾಡೇ ಬಿಟ್ಟೆವು. ಆದರೂ ಅಲ್ಲೂ ಅವರು ಕೇಳಿದ್ರು "ಇಲ್ಲಿ ok ಅಲ್ವಾ" ಅಂತ.
ಸಂದರ್ಶನದಲ್ಲಿ ನನಗೆ ಕೇಳೋಕೆ ತುಂಬಾ ಪ್ರಶ್ನೆಗಳಿತ್ತು, ಆದರೆ ಕೆಲವೊಂದು ಪ್ರಶ್ನೆಯಲ್ಲಿ ಅವರಿಂದ ಎಲ್ಲಾ ಉತ್ತರ ಒಮ್ಮೆಲೇ ಸಿಗುತ್ತಾ ಇತ್ತು. ಮತ್ತೆ ಅರ್ಧದಲ್ಲಿ ಪ್ರಶ್ನೆ ಕೇಳೋಕೆ ಆಗುತ್ತಿರಲಿಲ್ಲ ಯಾಕಂದ್ರೆ ಅವರು ಅಷ್ಟು ಹುಮ್ಮಸ್ಸಿನಲ್ಲಿ ಎಲ್ಲವನ್ನೂ ಹೇಳ್ತಾ ಇರೋವಾಗ ಮಧ್ಯ ಬಾಯಿ ಹಾಕೋಕೆ ನನಗೂ ಮನಸು ಬರಲೇ ಇಲ್ಲ. ಅಕಸ್ಮಾತ್ ನಾನು ಇನ್ನೊಂದು ಪ್ರಶ್ನೆ ಕೇಳೋಕೆ ಅಂತ ಹೋದಾಗ ಅವರು "ಇರಿ. ನಾನು ಮೊದಲು ಇದು ಹೇಳ್ತೀನಿ" ಅಂತ ಅವರ ಅನುಭವೀ ಕಥೆಗಳನ್ನ ಹುಮ್ಮಸ್ಸಿನಿಂದ ಹೇಳ್ತಾ ಹೋದರು. ಅವರ ವಯಸ್ಸಿನಿಂದ ಏನೋ ಗೊತ್ತಿಲ್ಲ ಹಲವೆಡೆ ಅವರ ಮಾತುಗಳು ಅಷ್ಟು ಸ್ಪಷ್ಟವಾಗಿ ಕೇಳುತ್ತಾ ಇರಲಿಲ್ಲ. ಅವರಾದರೋ ಮಾತನಾಡೋಕೆ ಕಷ್ಟ ಪಟ್ಟರೂ ಬಹಳ ಆಸಕ್ತಿಯಿಂದ ಮಾತಾಡುತ್ತಿದ್ದ ರೀತಿ ಕಣ್ಣ ಮುಂದೆ ಈಗಲೂ ಕಾಣಿಸ್ತಿದೆ. ಅಂತಹ ಮಹಾನ್ ವ್ಯಕ್ತಿ ಜೊತೆ ಒಂದೊಳ್ಳೆ ಸಮಯ ಕಳೆಯುವ ಅವಕಾಶ ಸಿಕ್ಕಿದ್ದು ಕರಾಡ ವಿಶ್ವ ತಂಡದಿಂದ. Thank you- team Karada Vishwa.
We are all going to miss you, Sir. May your legacy live on 🙏

