Karada Vishwa

Article · November 21, 2026

ಬಯಕೆಯ ಬಲೆ

By ಸೌಮ್ಯ ಗುರು ಕಾರ್ಲೆ

ಸೌಮ್ಯ ಗುರು ಕಾರ್ಲೆ

ಬಯಕೆಯ ಬಲೆಯಲ್ಲಿ ಸಿಲುಕಿದ ಮನುಜ ಒಳಗಣ್ಣ ತೆರೆಯದೆ ತೊಳಲಾಡುತ್ತಾ ಸಮಾಜಕ್ಕೆ ಕಂಟಕನಾಗಿ ಪರಿಣಮಿಸುವ ಕುರಿತು .... ಕನ್ನಡ ಕಾವ್ಯ ಸಾಹಿತ್ಯ ಸೌಂದರ್ಯದ ವಿದಳಿತವನರುಹ ವೃತ್ತದಲ್ಲಿ ರಚಿಸಿರುವ ಸಾಲುಗಳು.

ನಿಯಮ : ನ/ನ/ನ/ನ/ನ/ನ/ನ/ನ/ಗು = ೨೫ ಅಕ್ಷರಗಳು

ನಯನವ ತೆರೆಯದೆ ನಿಜಪದವರಿಯದೆ ಮೆರೆಯುವನಧಮನು ತಾನ್
ಬಯಕೆಯ ಸೆರಗನು ಪಿಡಿಯುತ ಜಗದೊಳ ನಿಯಮವ ಮರೆಯುವನೈ
ಸೆರೆಯೊಳು ಸಿಲುಕುತ ವಿಲವಿಲ ವಿಲಪಿಸಿ ಕಳೆವನು ಹಗಲಿರುಳನ್
ಭಯದೊಳ ನೆರಳಲಿ ಗಳಿಕೆಯ ನೆಪದಲಿ ಧರೆಯನೆ ನಶಿಸುವನೈ ||

ಹುಸಿನಗೆ ಮೊಗದಲಿ ಬಿಸಿ ಹಗೆ ಮನದಲಿ ದಯೆಯದು ನೆಪವಿಹುದೈ
ಕಸಿವಿಸಿ ಹಗಲಲಿ ಚಪಲವು ಮನದಲಿ ನಿದಿರೆಯ ಸುಳಿವಿರದೈ
ಮಸಿಯನು ಬಳಿವನು ದುರುಳರ ಜೊತೆಯಲಿ ಬೆರೆಯುತಲನುಚಣವೂ
ದಿಶೆಯನು ಬದಲಿಸಿ ನಡೆವನು ಗಣಿಸದೆ ವಿಬುಧರ ನುಡಿಗಳನೈ ||

Creative Writings