Karada Vishwa

Article · October 19, 2026

ಶರನ್ನವರಾತ್ರಿ ಸಂಭ್ರಮದಲ್ಲಿ ದುರ್ಗೆ

By ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಕುಂಟಿಕ್ಕಾನ ಶ್ರೀ ದುರ್ಗಾ ಪರಮೇಶ್ವರಿ ದೇಗುಲದಲ್ಲಿ,...

ಹಸಿರಿನ ಪ್ರಕ್ರತಿಯ ನಡುವಿನಲಡಗಿದ
ದುರ್ಗಾಮಾತೆಯ ದೇಗುಲವು /

ಪುಟ್ಟದಿರುವ ಈ ದೇಗುಲದಲ್ಲಿ
ನಮಾತ್ರಿಯ ಶುಭ ಸಂಭ್ರಮವು /

ಮಾವಿನೆಲೆಯ ಸಿರಿ ತೋರಣ ಕಟ್ಟಿ
ತಾಯಿಗೆ ಸಹೃದಯ ಆಹ್ವಾನ

ಬಂದೇಬಿಟ್ಟಳು ಬಿಂಬದ ಒಳಗೆ
ಕಳೆಯಲು ದುಃಖ ದುಮ್ಮಾನ /

ಮನೆ ಜನ, ಬಂಧು ಬಾಂಧವರೆಲ್ಲ
ಒಂದೆಡೆ ಸೇರುವ ಸವಿಘಳಿಗೆ,

ನವದಿನಕೂ ನವನವೀನ ರೀತಿಯ
ಶೃಂಗಾರವು ದುರ್ಗಾ ದೇವತೆಗೆ /

ನವ ದಿನ ನವವಿಧದಲ್ಲಿಹ ದುರ್ಗೆಗೆ
ಹಲವಿಧ ಪೂಜೆ ಪುರಸ್ಕಾರ

ಹೃದಯಮಂದಿರದಿ ನೆಲೆಸಿದ ತಾಯಿ
ದುರ್ಗಾಮಾತೆಗೆ ನಮಸ್ಕಾರ /

ಸರಳ ರೀತಿಯಲಿ ಹಲ ವಿಧ ಪೂಜೆ,
ಭಕ್ತಜನಕೆ ಸವಿ ಭೋಜನವು /

ಭಕ್ತರ ಪಾಲಿಗೆ ಸರಳದಿ ಸಿಗುವಾ
ಸರಳವಿರುವ ಸವಿ ವ್ಯಂಜನವು /

ವಿದ್ಯಾ ದಶಮಿಗೆ ಪುಸ್ತಕ ಪೂಜೆ
ಸರಸ್ವತಿಗೆ ಆರಾಧನೆಯು /

ದುರ್ಗೆಗೆ ದೀಪಾರಾಧನ ಸೇವೆ'
ನವರಾತ್ರಿಗೆ ಶುಭ ಮಂಗಳವು /



Creative Writings