Karada Vishwa

Article · August 15, 2026

ಚಾರಣ

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಯುವಕರ ತಂಡವು ಹೊರಟಿತು ನೋಡೀ
ಗಿರಿಶಿಖರಗಳೆಡೆ ಚಾರಣವಾ/

ಹೊರಡುವ ಸಮಯಕೆ ಬಾನಲಿ ಕಟ್ಟಿತು
ಪ್ರಕೃತಿಯು ಮುಗಿಲಿನ ತೋರಣವಾ/

ಹಚ್ಚನೆ ಹಸಿರೂ ಖಗ ಮೃಗ ಸಾಲೂ
ನೀಡಿತು ಕಣ್ಣಿಗೆ ಹೂರಣವಾ/

ಬೆನ್ನಿನ ಮೇಲಿನ ಭಾರದ ಚೀಲಾ
ಹೇಳಿತು ಅಗತ್ಯದ ಕಾರಣವಾ/


ಕೆರೆ ನದಿ ಸಾಗರ ನೀರಿನ ಆಗರ
ಕಾನನ ದಾಟುತ ಆ ನಡಿಗೆ /

ಗುರಿ ಇಟ್ಟವರೂ ಶಿಖರದ ಕಡೆಗೇ
ಅಡಿಗಳನಿಟ್ಟರು ಆ ಕಡೆಗೆ /

ದಟ್ಟನೆ ಕಾಡೂ ಹಿಮವಿಹ ಜಾಡೂ
ತಡೆಯದು ಚಾರಣಿಗರ ನಡಿಗೇ /

ಗುರಿಯೆಡೆಗಿರಿಸಿದ ನಿಶ್ಚಿತ ಮನಸೂ
ತಲುಪಿಸಿ ತವರನು ಗಮ್ಯದ ಕಡೆಗೆ/

ಜೊತೆಯಾಗಿರಿಸಿದ ಆ ನಡಿಗೇ
ಕೈಚಾಚಿತು ಬಾನಿನ ಕಡೆಗೇ /

Creative Writings