Karada Vishwa

Article · October 17, 2026

ನವರಾತ್ರಿ – ದಿನ ೪

ಚಿತ್ರ ರಚನೆ ಹಾಗೂ ಶ್ಲೋಕಾರ್ಥ ಸಂಗ್ರಹ : ರಕ್ಷಿತಾ ಭಟ್ ನುಳಿಯಾಲು

जयन्ती मंगला काली भद्रकाली कपालिनी।

दुर्गा क्षमा शिवा धात्री स्वाहा स्वधा नमोऽस्तु ते ॥

ಅರ್ಥ:-

• ಜಯಂತೀ: ಸರ್ವಶ್ರೇಷ್ಠ ವಿಜಯಶಾಲಿ.

• ಮಂಗಳಾ: ಭಕ್ತರಿಗೆ ಸದಾ ಶುಭ ಹಾಗೂ ಮಂಗಳವನ್ನು ಉಂಟುಮಾಡುವವಳು.

• ಕಾಳೀ: ಕಾಲವನ್ನು ನಿಯಂತ್ರಿಸುವವಳು ಹಾಗೂ ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನೊಳಗೆ ವಿಲೀನಗೊಳಿಸಿಕೊಳ್ಳುವವಳು.

• ಭದ್ರಕಾಳೀ: ಭಕ್ತರನ್ನು ಕರುಣೆಯಿಂದ ರಕ್ಷಿಸುವ ಮಂಗಳಕರ ರೂಪದವಳು.

• ಕಪಾಲಿನೀ: ಕೈಯಲ್ಲಿ ಮುಂಡ (ತಲೆಬುರುಡೆ) ಧರಿಸಿದವಳು (ಇದು ಅಹಂಕಾರದ ನಾಶವನ್ನು ಸೂಚಿಸುತ್ತದೆ).

• ದುರ್ಗಾ: ಸಂಕಷ್ಟಗಳಿಂದ ಪಾರುಮಾಡುವವಳು ಮತ್ತು ಯಾರಿಂದಲೂ ಸುಲಭವಾಗಿ ಜಯಿಸಲು ಸಾಧ್ಯವಿಲ್ಲದವಳು.

• ಶಿವಾ: ಕಲ್ಯಾಣ ಸ್ವರೂಪಿಣಿ (ಶಿವನ ಅರ್ಧಾಂಗಿ).

• ಕ್ಷಮಾ: ಭಕ್ತರ ತಪ್ಪುಗಳನ್ನು ಮನ್ನಿಸುವ ಕ್ಷಮಾಮಯಿ.

• ಧಾತ್ರೀ: ಇಡೀ ಸೃಷ್ಟಿಯನ್ನು ಸಲಹುವ ಜಗದ್ರಕ್ಷಕಿ.

• ಸ್ವಾಹಾ ಮತ್ತು ಸ್ವಧಾ: ಯಜ್ಞ-ಯಾಗಾದಿಗಳಲ್ಲಿ ದೇವತೆಗಳಿಗೆ ಮತ್ತು ಪಿತೃಗಳಿಗೆ ಅರ್ಪಿಸುವ ಹವಿಸ್ಸನ್ನು ಸ್ವೀಕರಿಸುವ ಶಕ್ತಿ.

• ನಮೋऽಸ್ತು ತೇ: ಅಂತಹ ದೇವಿಗೆ ನನ್ನ ಅನಂತ ನಮಸ್ಕಾರಗಳು.

Creative Writings