Karada Vishwa

Article · September 14, 2026

ಗಣಪತಿಗೆ ವಿಶೇಷ ಮುಳ್ಳು ಸೌತೆ ಅಪ್ಪ

ರಕ್ಷಿತಾ ನುಳಿಯಾಲು

ಬೇಕಾದ ಸಾಮಗ್ರಿಗಳು
ಅಕ್ಕಿ -2½ ಕುಡ್ತೆ

ಬೆಲ್ಲ-೫ಅಚ್ಚು

ಮುಳ್ಳು ಸೌತೆ -೫-೬(ಸಣ್ಣ ಊರಿನ ಸೌತೆ,ಒಂದುಬೆರಳಿನಷ್ಟು ಉದ್ದದ್ದು)

ತುಪ್ಪ/ಎಣ್ಣೆ -ಕರಿಯಲು

ನೀರು-ಅಗತ್ಯಕ್ಕೆ ನೋಡಿಕೊಂಡು

ತಯಾರಿಸುವ ವಿಧಾನ

ಅಕ್ಕಿಯನ್ನು ಹಿಂದಿನ ದಿನ ರಾತ್ರಿ ನೆನೆಸಿಡಬೇಕು. ಮುಳ್ಳು ಸೌತೆಕಾಯಿಯನ್ನು ತುರಿದು ಅದರ ನೀರನ್ನು ಹಿಂಡಿ ಇಟ್ಟುಕೊಳ್ಳಿ. ಅಕ್ಕಿಜೊತೆಗೆ ಅದೇ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಅದಕ್ಕೆ ಬೆಲ್ಲವನ್ನು ಕೆರಸಿ ಹಾಕಿ. ಹಿಟ್ಟಿನ ಹದ ನೋಡಿಕೊಂಡು ನೀರು ಸೇರಿಸಿ, ಹಿಟ್ಟು ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಮಾಡಿ. ನಂತರ ಅಪ್ಪೆ ಕಾವಲಿ ಇಟ್ಟು ಬಿಸಿ ಬಂದ ನಂತರ ತುಪ್ಪ/ಎಣ್ಣೆ ಹಾಕಿ ಬಿಸಿ ಆದ ಮೇಲೆ ಹಿಟ್ಟನ್ನು ಹಾಕಿ ಒಂದು ಬದಿ ಬೆಂದ ಮೇಲೆ ಮಗುಚಿ ಹಾಕಿ ಇನ್ನೊಂದು ಬದಿಯನ್ನು ಬೇಯಿಸಿ ತೆಗೆಯಿರಿ.

Food