Karada Vishwa

Article · March 19, 2026

ಯುಗಾದಿ

- ಸಂಧ್ಯಾ ಕೊರೆಕ್ಕಾನ

ಫಾಲ್ಗುಣ ಕಳೆದಿದೆ 
ಚೈತ್ರವು ಬಂದಿದೆ
ಹೂಗಿಡ ಮರವು ಚಿಗುರುತಿದೆ
ಹೊಸತದು ಕಂಡಿದೆ
ಲಾಸ್ಯದಿ ಅರಳಿದೆ
ಯುಗಾದಿ ಎಂದು ಹೇಳುತಿದೆ 

ಬೇವಿನ ಕಹಿಯು 
ಬೆಲ್ಲದ ಸಿಹಿಯು
ಜತೆಗದು ಉಣ್ಣುವ ಕಾಲವಿದು
ಹೊಸವರ್ಷದ ಹೊಸ 
ಹರುಷದ ಋತುವು
ನಮ್ಮನು ಬಂದು ತಲುಪಿಹುದು

ಪರಾಭವ ನಾಮದ 
ವರುಷವು ಇದ್ದರು 
ಪರಾಭವ ಬರದು ನಮಗೆಂದು
ಬಂದಿಹ ಹೊಸಹೊಸ 
ಚಿಗುರುಗಳಂತೆ
ನಮ್ಮಯ ಬಾಳು ಹಸಿರಾಗಿ

ಸಿಹಿ ಕಹಿನೋವನು 
ಸಮಭಾವದಲಿ
ಕಾಣುವ ನಾವು ಇದಿರಾಗಿ
ಸಾಗುತ ಸಾಗುತ 
ಮುಂದಕೆ ಸಾಗಿ
ಕಾದಿದೆ ಯುಗಾದಿ ನಮಗಾಗಿ 


Creative Writings
ಯುಗಾದಿ