Karada Vishwa

News · August 25, 2025

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾಗವತ ಸಪ್ತಾಹ ಪ್ರಾರಂಭ

ಹೊರೆಕಾಣಿಕೆ ಮೆರವಣಿಗೆ ಹಾಗೂ ಆಚಾರ್ಯರಾದ ಶ್ರೀ ಮಾಂಕುಳಂ ಗೋವಿಂದನ್ ನಂಬೂದಿರಿ ಅವರಿಗೆ ಪೂರ್ಣಕುಂಭ ಸ್ವಾಗತ

24 ಆಗಸ್ಟ್ 2025ರಿಂದ 31 ಆಗಸ್ಟ್ 2025ರವರೆಗೆ ತೈರೆ ಶ್ರೀ ದುರ್ಗಾಪರಮೇಶ್ವರೀ  ದೇವಸ್ಥಾನದಲ್ಲಿ ನಡೆಯಲಿರುವ ಭಾಗವತ ಸಪ್ತಾಹವು ಶುಭಾರಂಭಗೊಂಡಿತು.

ಹೊರೆಕಾಣಿಕೆ ಮೆರವಣಿಗೆ – 24.08.25 ರಂದು ಬೆಳಿಗ್ಗೆ 10 ಗಂಟೆಗೆ ಅಮರಾಪುರಿ ದೈವಸ್ಥಾನದಿಂದ ತೈರೆ ದೇವಸ್ಥಾನಕ್ಕೆ ವಿಜೃಂಭಣೆಯಿಂದ ನಡೆಯಿತು.

ನಂತರ ಸಂಜೆ 4 ಗಂಟೆಗೆ ಭಾಗವತ ಸಪ್ತಾಹ ನಡೆಸಿಕೊಡುವ ಆಚಾರ್ಯರಾದ ಶ್ರೀ ಮಾಂಕುಳಂ ಗೋವಿಂದನ್ ನಂಬೂದಿರಿ ಹಾಗೂ ಅವರ ಪರಿವಾರವನ್ನು, ದೇವಸ್ಥಾನದ ಮೊಕ್ತೇಸರರು ಮತ್ತು ಭಾಗವತ ಸಪ್ತಾಹ ಯಜ್ಞ ಸಮಿತಿಯ ಅಧ್ಯಕ್ಷರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬದಿಯಡ್ಕದ ಧಾರ್ಮಿಕ ಮುಂದಾಳು ಹಾಗೂ ವ್ಯಾಪಾರಿ ಶ್ರೀ ಬಿ ವಸಂತ ಪೈ, ಮಲ್ಲ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರರಾದ ಶ್ರೀ ಸತ್ಯನಾರಾಯಣ ಭಟ್ ಆನೆಮಜಲು, ಶ್ರೀ ಕ್ಷೇತ್ರ ತೈರೆಯ ಆಡಳಿತ ಮೊಕ್ತೇಸರರಾದ ರಾಧಾಕೃಷ್ಣ ಭಟ್ ತೈರೆ ಹಾಗೂ ಭಾಗವತ ಸಪ್ತಾಹ ನಡೆಸಿಕೊಡುವ ಆಚಾರ್ಯರಾದ ಶ್ರೀ ಮಾಂಕುಳಂ ಗೋವಿಂದನ್ ನಂಬೂದಿರಿಯವರು ಜೊತೆಗೂಡಿ ದೀಪ ಪ್ರಜ್ವಾಲನೆಯೊಂದಿಗೆ ನೆರವೇರಿಸಿದರು.

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾಗವತ ಸಪ್ತಾಹ ಪ್ರಾರಂಭ