Karada Vishwa

Article · June 30, 2026

ನಾನು ಪಡೆದ ಸ್ಕಾಲರ್‌ಶಿಪ್

- ಶ್ರದ್ಧಾ ಕನ್ನಡ್ಕ

ನಮಸ್ಕಾರ. ನಾನು ಶ್ರದ್ಧಾ. ವಿದ್ಯಾರ್ಥಿ ದಶೆಯಲ್ಲಿ ನನಗೆ ಲಭಿಸಿದ ವಿದ್ಯಾರ್ಥಿವೇತನಗಳ ಕುರಿತು ನನ್ನ ಅನುಭವವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ನಾನು ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾಗ National Means-cum-Merit Scholarship Scheme (NMMS) ಪರೀಕ್ಷೆಯನ್ನು ಉತ್ತೀರ್ಣಗೊಂಡು, ಸರ್ಕಾರದಿಂದ ಪಿಯುಸಿ ವರೆಗೆ ವಿದ್ಯಾರ್ಥಿವೇತನವನ್ನು ಪಡೆದಿದ್ದೇನೆ.

ತದನಂತರ, Druthi Foundation ಸಂಸ್ಥೆಯ ಮಾರ್ಗದರ್ಶನದಲ್ಲಿ, ನಾನು Foundation for Excellence ಸಂಸ್ಥೆಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದೆ. ಆ ಸಂಸ್ಥೆಯ ವತಿಯಿಂದ ನನ್ನ ತಾಂತ್ರಿಕ ಪದವಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ವೆಚ್ಚಗಳಿಗೆ ಸಮರ್ಪಕವಾದ ಆರ್ಥಿಕ ಸಹಾಯ ಲಭಿಸಿತು.

ಪ್ರಸ್ತುತ, ಆ ಸಂಸ್ಥೆಯವರು ತಾಂತ್ರಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ಇತರೆ ಪದವಿ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತಿ ಇರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಇದಕ್ಕೆ ಜೊತೆಯಾಗಿ, OP Jindal Group, Indian Oil Corporation, ಹಾಗೂ Fair & Lovely ಸಂಸ್ಥೆಗಳೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತಿವೆ. ಸಂಬಂಧಿತ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ಮಾಹಿತಿಯನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

Scholarships