
Article · August 24, 2026
ಚುಟುಕುಗಳು
ರಾಮಣ್ಣ ಚೆನ್ನಾಂಗೋಡು
ರಾಜಕಾರಣ
ರಾಜಕಾರಣದೊಳಗೆ
ಏನುಂಟು, ಮಣ್ಣು I
ಮಾಡಕಲಿತರೆ ಸಾಕು
ಗಾಯವನು ಹುಣ್ಣು II
ಇಷ್ಟು ಕಲಿತುಕೊ, ಸಾಕು
ಅಲ್ಲಿಬೆಳೆ ಹುಲುಸು I
ಇಲ್ಲದಿದ್ದರೆ ವ್ಯರ್ಥ -
ವಾದೀತು ಕನಸು II
"ಬೇಟೆ "...!
ಬೇಟೆಗಿಳಿದರೆ ಭಾವ,
ಮಾಧ್ಯಮದ ಮಂದಿ I
ಸಿಗಿದು ಮಾಡುತ್ತಾರೆ
ಮಿಕಗಳನು ಚಿಂದಿ II
ಸಿಗದೆ ಓಡಾಡಿದರೆ
ಉಳಿದೀತು ಮಾನ I
ಎಡವಿಬಿದ್ದರೆ ಖಾತ್ರಿ
ನಿನಗೆ" ಸಮ್ಮಾನ" II

Creative Writings
