Karada Vishwa

News · September 9, 2026

ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು(ರಿ) ವಾರ್ಷಿಕೋತ್ಸವ – ಚಂಡಿಕಾ ಯಾಗ ಹಾಗೂ ಕರಾಡ ಕಲೋತ್ಸವಕ್ಕೆ ಸಿದ್ಧತೆ

ಕರಾಡ ಸಮುದಾಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕರಾಡ ಬ್ರಾಹ್ಮಣ ಸಮಾಜ (ರಿ.), ಬೆಂಗಳೂರು ವತಿಯಿಂದ ಈ ವರ್ಷದ ವಾರ್ಷಿಕೋತ್ಸವ ಹಾಗೂ ಚಂಡಿಕಾ ಯಾಗವನ್ನು ಸೆಪ್ಟೆಂಬರ್ 20, 2026ರ ಭಾನುವಾರದಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಶ್ರೀ ಭಾರತೀ ತೀರ್ಥ ಸಭಾಂಗಣ, ಶಂಕರ ಮಠದ ಆವರಣ, ಬಸವನಗುಡಿ, ಬೆಂಗಳೂರು ಇಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮವು ಧಾರ್ಮಿಕ ಆಚರಣೆಗಳ ಜೊತೆಗೆ ಕರಾಡ ಸಮುದಾಯದ ಪ್ರತಿಭೆ, ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುವ ವೇದಿಕೆಯಾಗಲಿದೆ.

ಚಂಡಿಕಾ ಯಾಗ

ಬೆಳಗ್ಗೆ 6 ಗಂಟೆಯಿಂದ ಚಂಡಿಕಾ ಯಾಗ ಆರಂಭವಾಗಲಿದ್ದು, 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಭಕ್ತಿಭಾವದಿಂದ ನಡೆಯಲಿರುವ ಈ ಯಾಗದಲ್ಲಿ ಕರಾಡ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗುವಂತೆ ಸಮಾಜವು ಆಹ್ವಾನಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ಮನೆಮನೆಗಳಲ್ಲಿ ನಡೆಯುತ್ತಿರುವ ಸಪ್ತಶತಿ ಜಪದಲ್ಲಿ ಅನೇಕರು ಭಾಗವಹಿಸುತ್ತಿದ್ದಾರೆ ಹಾಗೂ Karada Vishwa ದ Karada Forms ನ ಜಪಾ ಕೌಂಟರ್ ನಲ್ಲಿ ಈಗಾಗಲೇ 72666 ಜಪಸಂಖ್ಯೆ ದಾಖಲಾಗಿದೆ.

ಚಂಡಿಕಾ ಯಾಗದ ಅಂಗವಾಗಿ ಸಪ್ತಶತಿ ಪಾರಾಯಣ ಸೇವೆ, ದಂಪತಿ ಪೂಜಾ ಸೇವೆ, ಸುಹಾಸಿನಿ ಪೂಜಾ ಸೇವೆ, ಕುಮಾರಿ ಪೂಜಾ ಸೇವೆ ಇತ್ಯಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸೇವಾದಾರರಿಗೆ ಸಂಕಲ್ಪದ ವ್ಯವಸ್ಥೆಯೂ ಇರಲಿದೆ. ಸೇವೆಯಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳಲು ಕರಾಡ ವಿಶ್ವ App ನ Pay & Donate ವಿಭಾಗದಲ್ಲಿ ಲಭ್ಯವಿರುವ 'ಚಂಡಿಕಾ ಯಾಗ ' form ನ್ನು ಭರ್ತಿಗೊಳಿಸಿ ಸೇವೆಯ ನಿಗದಿತ ಮೊತ್ತ ಅಥವಾ ನೀವು ಇಚ್ಛಿಸುವ ದೇಣಿಗೆಯನ್ನು form ಮೂಲಕವೇ ಪಾವತಿಸಬೇಕಾಗಿ ಕೋರಲಾಗಿದೆ.

ಕರಾಡ ಕಲೋತ್ಸವ – ಪ್ರತಿಭೆಗೆ ವೇದಿಕೆ

ವಾರ್ಷಿಕೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ಕರಾಡ ಕಲೋತ್ಸವ. ಬೆಳಗ್ಗೆ 9.30ರಿಂದ ಕಲೋತ್ಸವದ ಉದ್ಘಾಟನೆಯೊಂದಿಗೆ ಮಕ್ಕಳು ಮತ್ತು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸಮಾಜದ ಸದಸ್ಯರಿಗೆ ಉತ್ತಮ ಅವಕಾಶವಾಗಲಿದೆ.

ಜೊತೆಗೆ ಕರಾಡ ಕ್ವಿಜ್, ಆದರ್ಶ ದಂಪತಿಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಆಸಕ್ತರು ದಿನಾಂಕ 10 ಸೆಪ್ಟೆಂಬರ್ ಒಳಗಾಗಿ ತಮ್ಮ ಹೆಸರುಗಳನ್ನು ಕರಾಡ ವಿಶ್ವ App ನ 'Karada Forms ' ವಿಭಾಗದಲ್ಲಿ ಲಭ್ಯವಿರುವ ' ಕರಾಡ ಕಲೋತ್ಸವ ' form ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

ಮಧ್ಯಾಹ್ನ 12 ಗಂಟೆಗೆ ಶ್ರೀ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ತುಮಕೂರು ಅವರ ಆಶೀರ್ವಚನದೊಂದಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಕಾರ್ಯಕ್ರಮವು ವಿಶೇಷ ಮಹತ್ವ ಪಡೆದುಕೊಂಡಿದೆ.

ಮಳಿಗೆಗಳಿಗೂ ಅವಕಾಶ

ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಕರಾಡ ಸಮುದಾಯದ ಉದ್ಯಮಿಗಳು ಹಾಗೂ ಉತ್ಪನ್ನ ತಯಾರಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಧಾರ್ಮಿಕ ಶ್ರದ್ಧೆ, ಕಲೆ-ಸಂಸ್ಕೃತಿಯ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮತ್ತು ಮಳಿಗೆಗಳ ವೈವಿಧ್ಯ- ಇವೆಲ್ಲವನ್ನೂ ಒಳಗೊಂಡಿರುವ ಈ ವಾರ್ಷಿಕೋತ್ಸವವು ಕರಾಡ ಸಮುದಾಯದ ಒಗ್ಗಟ್ಟಿನ ಕಾರ್ಯಕ್ರಮವಾಗಿದೆ.

ಇಡೀ ಕಾರ್ಯಕ್ರಮಕ್ಕೆ ವಿವಿಧ ಹಂತಗಳಲ್ಲಿ ಅಗತ್ಯವಿರುವ ಡಿಜಿಟಲ್ ಸಹಕಾರವನ್ನು ಕರಾಡ ವಿಶ್ವವು ನೀಡುತ್ತಿದೆ.

ಬನ್ನಿ… ಕುಟುಂಬ ಸಮೇತರಾಗಿ ಭಾಗವಹಿಸಿ.

ಎಲ್ಲರೂ ಒಂದಾಗಿ ಸೇರಿ ಕರಾಡ ಸಮಾಜದ ಈ ವಾರ್ಷಿಕೋತ್ಸವ ಹಾಗೂ ಚಂಡಿಕಾಯಾಗವನ್ನು ಯಶಸ್ವಿಗೊಳಿಸೋಣ.

📅 ದಿನಾಂಕ: 20 ಸೆಪ್ಟೆಂಬರ್ 2026, ಭಾನುವಾರ

📍 ಸ್ಥಳ: ಶ್ರೀ ಭಾರತೀ ತೀರ್ಥ ಸಭಾಂಗಣ, ಶಂಕರ ಮಠದ ಆವರಣ, ಬಸವನಗುಡಿ, ಬೆಂಗಳೂರು – 560004

Community
ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು(ರಿ) ವಾರ್ಷಿಕೋತ್ಸವ – ಚಂಡಿಕಾ ಯಾಗ ಹಾಗೂ ಕರಾಡ ಕಲೋತ್ಸವಕ್ಕೆ ಸಿದ್ಧತೆ