Karada Vishwa

Article · August 30, 2026

ಸಂತತಿ

ವಿದ್ಯಾ ಎಡಮಲೆ

ಮನೆಗೊಬ್ಬ ಮಗನಿರಲಿ ಮನೆ ವಾರ್ತೆಗಾಗಿ...

ಮಗಳೊಬ್ಬಳಿರಲಿ ಮನದ ಮಧುರಕ್ಕಾಗಿ...

ಮಿಂಚುವರು ಹಬ್ಬದಲಿ ಕುಣಿಯುವರು ಸಂತಸದಿ

ಕೆಲಸ ಕಾರ್ಯದಿ ಕೈಜೋಡಿಸುವರು...

ಮನದೊಳು ನಿಂತು ಹೆಜ್ಜೆ ಹೆಜ್ಜೆಗೂ

ಕಷ್ಟ ಇಷ್ಟಗಳ ಜೊತೆಯಲ್ಲಿ ಸವಿಯುವರು..

ಸುಖ ಜೀವನಕೆ ನಾಂದಿ ಹಾಡುವರು

ಅದಕ್ಕೇ ಹಿರಿಯರೆನ್ನುವರು

ಮಕ್ಕಳಿರಲವ್ವಾ ಮನೆ ತುಂಬಾ..

ಮನೆ ಮನಕೆ ಮುದ ನೀಡುವ

ಸವಿ ನುಡಿವ.. ಸುಸಂಸ್ಕೃತ

ಮಕ್ಕಳು ಬಾಳ ದೀವಿಗೆಯಾಗಲಿ

Creative Writings
ಸಂತತಿ