Karada Vishwa

Article · December 15, 2025

ಏನಿದು ವೈಚಿತ್ರ್ಯ?

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

☘️☘️☘️☘️☘️

ಏನಿದು ಸೃಷ್ಟಿಯ ವೈಚಿತ್ರ್ಯ ?
ಹಿರಿದಿಹುದೂ ಭೂಮಿಯ ಗಾತ್ರ
ಬಾನಿಗೊ ಎಲ್ಲೆಗಳೇ ಇಲ್ಲ
ಎಲ್ಲೆಲ್ಲೋ ಹರಡಿದೆಯಲ್ಲ!

ಆ ಸೂಯ೯ನು ಉರಿಯುವ ಗೋಲ
ಇರಬಹುದೇನೋ ಇಂಗಾಲ ?
ಹಗಲಿಡೀ ಬೆಳಕನ್ನೀಯುವನು 
ಸಂಜೆ ವೇಳೆ ಮರೆಯಾಗುವನು 

ಚಂದ್ರನಿಗೋ ತಾರೆಯ ಬಳಗ 
ಹೊಂದಾಣಿಕೆ ಇದೆ ಅವರೊಳಗ
ಭೂಮಿಯು ನೀರಲಿ ತೇಲುತಿದೆ 
ನಭದಿಂ ನೀರು ಸುರಿಯುತಿದೆ 

ಏನಿದು ಸೃಷ್ಟಿಯ ವೈಚಿತ್ರ್ಯ 
ಹೆಚ್ಚಿಹುದೂ 'ವಾತದ 'ಪಾತ್ರ
ಪಂಚ ಭೂತದಿಂ ನಿರ್ಮಾಣ
ಪಂಚಭೂತ ಸರ್ವಾಂಗೀಣ!
Creative Writings
ಏನಿದು ವೈಚಿತ್ರ್ಯ?