
Article · March 24, 2026
ಉಬ್ಭೇರ್ಲಿ ರುಂಠಿ (ಎಲೆ ಅಡ)
- ರಕ್ಷಿತಾ ಭಟ್ ನುಳಿಯಾಲು
ಉಬ್ಭೇರ್ಲಿ ರುಂಠಿ ಔಂಥಲಾಂತಿ ಏಕಿ ಪೋರ್ನೆ ತಿಂಡೀಣೂಚಿ ಮ್ಹಣ್ಯೇದ. ದಲ್ಲೆ ಈ ಅಡಿಗ ಅಮ್ಮಿ ಮಾತ್ರ ನೋಯೆಸ ಮಲಯಾಳ್ಯೋಂ, ತಮಿಳೀಂ ಒಟ್ಟು ಕರ್ರಿ. ಅತ್ತ ಯೂಟ್ಯೂಬ್ ನ್ನು ಪಳೋನೊ ಹಕ್ಕಡೈಲೆ ಕರ್ರಿ. ದಲ್ಲೆ ಟೆಂಕಾರಿ ವೆತ್ತಣ ಹಜ್ಜಂ ಗೊಡ್ಡಾಣಿ ಘಲ್ಲಲಂ ಭರ್ತಿ ಕರ್ರಿಂ ತೀಂ. ಅಮ್ಮಿ ಭರ್ತಿ ಕರಪ ಗೊಡ್ಡಾಣಿ ಘನ್ನತ್ತಿಲ್ಲಲಂ. ಆಜಿ ಹಾವಂ ತೇಂ ಕಸಂ ಕರಪಣು ಮ್ಹಣಾಕ ಐಲ್ಲೆಲೆಂ.
ದಾಯೆಂದಲ್ಲ ಸಾಮಗ್ರಿ:-
ಹಂಗ ಹವೆ ದೋಂಥರ ತಂದು ಕಂಙಳ್ಳೆಸ್ಸಿ. ಉಕ್ಕಣ್ಣೆಣೆ ಸೂರಿ. ಥೊಗಡಿಂ ಬರೀ ಸೂರಿ ಮಾತ್ರ ಘಾನ್ನುಲೆ ಕರ್ರಿ. ದಲ್ಲೆ ಬರೀ ಉಕ್ಕಣ್ಣೆ ಮಾತ್ರ ದೈನ ತಕ್ಕ ಅಂಟು ನತ್ಥಿಲ್ಲಾನ್ನು, ಇದ್ದು ದಲ್ಲೀ ಸೂರಿ ಘಲ್ಲುಂಚೆದಾರಿ.
ಉಕ್ಕಣ್ಣೆ -3ಕುಡ್ಚಿಂ
ಸೂರಿ -3ಕುಡ್ಚಿಂ
ಕತ್ತಳಿ -ಏಕ ಅರ್ದುಕ
ಲೋಣ -ರುಚೀಕ
ತೇಲ -4 ಕೈಶೆ
ಕರಪ ಕಸಂ?
ದೋಂಥರ ತಂದು ಧೌನು ಫುಳ್ಳ ದೀಸು ಉದ್ಕಾನ್ನು ಫುಗ್ಗಾ ದೇರುಂಚೆ. ದುಸರೇ ದೀಸು ಉದೊ ಒಟ್ಟು ಕಾಣ್ಣು ಗ್ರೈಂಡರಾನ್ನು ತಂದುಲೆ ಕತ್ತಳಿಲೆ, ಲೋಣೈಲೆ ಘಾನ್ನು ಇದ್ದಿದ್ದೂ ಉದೋ ಘಾನ್ನು ಘಟ್ಟಿ ಪೀಠ ರುಂತ್ಸುನ್ನ. ರುಂತ್ಸುನು ದೌನು ಪೀಠ ಏಕ ಪಾತ್ರಾನ್ನು ಕಾಣ್ಣು ತಕ್ಕ ಉದೊ ಉಣೇಣು ಸೋಳ್ಳೆ ಇದ್ದು ಉದೊ ಘಾನ್ನು ಕಲ್ಲಾ. ಅಖೇರೀಕ ತೇಲಲೆ ಘಾನ್ನು ಕಲ್ಲುನು ಎಕ್ಕಿಕಡೇಕ ದೇರಾ.
ಅಣಿ ಶರತಂ ಕಂಙಣ್ಣು (ಕಡೆ ಶರತ ದಲ್ಲೆ ರೋಕ ಓರಿಟುಂ ಸಗಲ ಪರೇಂ ಎಕ್ಕೂ ಥರು ಮೇಡ್ರ) ಧೌನು /ಫುಗ್ಗೇಲ್ಲ ಅಂಗೋಟ್ಯೇನೆ ಪೂಸುನು ತಾನ್ನು ರುಂಠಿ ಥಪ್ಪಿಲ್ಲಸಂ ದಿಗ್ಘಾಣೀಕ ಥಪ್ಪುನ್ನ ಪೀಠ. ಮಾಣ ಶರತಂ ದೋಣ್ಣು ಶಿಜ್ಜಾಕ ದೇರುನ್ನ. ಸಾಧಾರಣ ಅರ್ಧಿ ಘಂಟ ದಾಯಿ ಶಿಜ್ಜಾಕ. ಮಾಣ ಠಾಳೀನ್ನೂ ಅಚ್ಛಿಲ್ಲೆ ರೋಕ. ಗ್ಯಾಸಾನ್ನು ದಲ್ಲೆ ಅರ್ಧಿ ಘಂಟ ಹೊಳ್ಳ ಉಜ್ಜಾರಿಣೆ ಮಾಣ ಏಕ ಕಾಲು ಘಂಟ ಸನ್ನ ಉಜ್ಜಾರಿ ಶಿಜ್ಜಾಯ.
ಎಲೆ ಅಡ
ಬೇಕಾಗುವ ಸಾಮಾಗ್ರಿಗಳು:-ನಾನು ಇಲ್ಲಿ ಬೆಳ್ತಿಗೆ ಹಾಗೂ ಕುಚ್ಚಲಕ್ಕಿ ಎರಡನ್ನೂ ತಗೊಂಡಿರೋದು. ಬೆಳ್ತಿಗೆ ಮಾತ್ರ ಉಪಯೋಗಿಸಿಯೂ ಮಾಡಬಹುದು.
ಕುಚ್ಚಿಲಕ್ಕಿ -3ಕುಡ್ತೆ
ಬೆಳ್ತಿಗೆ ಅಕ್ಕಿ -3ಕುಡ್ತೆ
ತೆಂಗಿನ ತುರಿ -ಅರ್ಧ ಗಡಿಯದ್ದು
ಉಪ್ಪು -ರುಚಿಗೆ ತಕ್ಕಷ್ಟು
ಎಣ್ಣೆ -4ಚಮಚ
ಮಾಡುವ ವಿಧಾನ:-
ಹಿಂದಿನ ದಿನ ರಾತ್ರಿಯೇ ತೊಳೆದು ನೆನೆಸಿಟ್ಟ ಅಕ್ಕಿಯ ನೀರೆಲ್ಲ ಬಸಿದು ಅದನ್ನು ಗ್ರೈಂಡರಿಗೆ ಹಾಕಿ ಜೊತೆಗೆ ತೆಂಗಿನ ತುರಿ, ಉಪ್ಪು ಹಾಕಿ ಚೂರು ಚೂರೇ ನೀರು ಹಾಕುತ್ತಾ ನುಣ್ಣಗೆ ಗಟ್ಟಿಯಾಗಿ ರುಬ್ಬಿ ತೆಗೆದಿಟ್ಟುಕೊಳ್ಳಿ. ನಂತರ ಅಗತ್ಯ ಇದ್ದಲ್ಲಿ ನೀರು ಸೇರಿಸಬಹುದು. ಎಣ್ಣೆಯನ್ನೂ ಹಾಕಿ ಕಲಸಿ ಒಂದು ಕಡೆ ಇಡಿ. ನಂತರ ಬಾಳೆ ಎಲೆ (ಕಡೆ ಎಲೆ ಇದ್ದಲ್ಲಿ ಒಳ್ಳೇದು, ಯಾಕೆಂದರೆ ಮೇಲಿಂದ ಕೆಳಗಿನವರೆಗೂ ಒಂದೇ ತರ ಸಿಗುತ್ತದೆ) ತೊಳೆದು/ನೆನೆಸಿದ ಬಟ್ಟೆಯಿಂದ ಒರೆಸಿ ಅದಕ್ಕೆ ಹಿಟ್ಟನ್ನು ಹಾಕಿ ರೊಟ್ಟಿ ತಟ್ಟಿದ ಹಾಗೆ ಉದ್ದಕ್ಕೆ ತಟ್ಟಿ ಎಲೆಯನ್ನು ಮಡಚಿ ಬೇಯಲು ಇಡಿ. ಕಟ್ಟಿಗೆ ಒಲೆ ಆದಲ್ಲಿ ಅರ್ಧ ಗಂಟೆಯ ಕಾಲ ದೊಡ್ಡಉರಿಯಲ್ಲಿ ಹಾಗೂ ಆ ನಂತರ ಕೆಂಡದಲ್ಲೇ ಇರಲಿ. ಗ್ಯಾಸ್ ಒಲೆ ಆದಲ್ಲಿ ಅರ್ಧ ಗಂಟೆ ಕಾಲ ದೊಡ್ಡ ಉರಿಯಲ್ಲಿ ಹಾಗೂ ಕಾಲು ಗಂಟೆ ಮಧ್ಯಮ ಉರಿಯಲ್ಲಿ ಬೇಯಿಸಿ.
(ವಿ.ಸೂ:- ಇಲ್ಲಿ ನಾನು ಕೊಟ್ಟ ಅಳತೆಯಲ್ಲಿ 6ಜನಕ್ಕೆ ಆಗುವಷ್ಟು ರೊಟ್ಟಿಗಳು ಆಗುತ್ತವೆ ಅಂದರೆ ಸಾಧಾರಣ 6-8)
Food
