Karada Vishwa

Article · July 10, 2026

ತಾಯ್ತನ

--ಸಂಧ್ಯಾ ಕೊರೆಕ್ಕಾನ

ಚಿಗುರೊಡೆಯತೊಡಗಿತ್ತು ಗರ್ಭದಲಿ ಶಿಶುವು

ವಾಕರಿಕೆ ಮೊದಲೆರಡು ಮಾಸದ ಸುಳಿವು

ಸಂಭ್ರಮದ ಕೌತುಕದ ದಿನಗಳವು ಕೆಲವು

ಮನೆಯಲ್ಲಿ ಮನದಲ್ಲಿ ಹರುಷದಾ ಅರಿವು

ಹುಳಿಮಾವು ರುಚಿಯದುವೆ ಬಾಯಿಗಿರೊ ಚಪಲ

ಬೇಡವಾಯಿತು ಆಗ ಇತರ ರುಚಿ ಸಕಲ

ಮತ್ತೈದು ಮಾಸದಲಿ ಆಸೆಗಳು ವಿಪುಲ

ಮೈಕೈ ತುಂಬುತ್ತ ಮುಖವದುವೆ ಪ್ರಫುಲ್ಲ

ನವಮಾಸ ಕಳೆದಿರಲು ಬಂದಾಯ್ತು ಭುವಿಗೆ

ಬಂದಿತದು ರಸನಿಮಿಷ ಸಂತೋಷ ಘಳಿಗೆ

ತಾಯ್ತನದ ಸುಖದಲ್ಲಿ ತೇಲಾಡೊ ಹೊತ್ತು

ಆ ಮುದ್ದು ಕಂದನಿಗೆ ನೀಡಲದು ಮುತ್ತು

Creative Writings
ತಾಯ್ತನ