Karada Vishwa

Article · November 4, 2026

ಭಾವಗಾನ

ವೀಣಾ ಎಂ ಭಟ್

ಜಾರಿ ಹೋಯಿತೇ ಮನವು ಸೇರದಾಯಿತೇ

ಕ್ರೂರವಾಯಿತೇ ವಿಧಿಯು ಬರಿದಾಗಿ ಹೋಯಿತೇ ||ಜಾರಿ||

ಹೃದಯ ವೀಣೆ ತಂತಿ ಮಿಡಿಯೆ ಮಧುರಮಿಲನ ನುಡಿವಗಾನ

ಹರಿದ ತಂತಿ ಮೀಟಲೇನು ನಾದ ಹೊಮ್ಮಿ ಬರುವುದೇ||ಜಾರಿ||

ಹಂದರದ ಸುಂದರ ಜಾಜಿ ದಳವು ಬಿರಿಯೆ ಸೌರಭ ಬೀರಿ

ಮಂದಮಾರುತ ಬೀಸಿ ಬರಲು ಶೂನ್ಯದಲ್ಲಿ ಕಾಮನೇ ||ಜಾ||

ದೂರ ಗುಡಿಯ ಗಂಟೆಯ ಸದ್ದು ಹೇರಿ ಬಂತು ತಂಬೆಲರಲ್ಲಿ

ಭಾರವಾಯಿತೆ ಹೃದಯ ವಾಲದಾಯ್ತೆ ದೇವನ ಕಡೆಗೆ ||ಜಾ||

ತಿಳಿನೀಲ ಆಗಸದಲ್ಲಿ ಕರಿ ಮುಗಿಲು ತೇಲುತ ಬರಲು

ಬಿರುಗಾಳಿ ಬೀಸಿ ಮುಗಿಲ ದೂರತೀರಕೆ ಒಯ್ಯುವುದೇ||ಜಾ ||

Creative Writings