
Article · April 19, 2026
ಕ್ರೀಡೆಗೊಂದು ಹಾಡು
- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ.
ಮಂಗಳೂರಲ್ಲಿಂದು ಕ್ರೀಡಾಕೂಟ
ಮಹಿಳೆಯರೂ ಭಾಗವಹಿಸುವ ಚಂದದಾಟ
ಸಿದ್ದವಾಗಿಹುದಂತೆ ತಂಡಗಳು ಎಂಟು
ಹೊತ್ತು ತರುವವರಾರು ಬಹುಮಾನ ಗಂಟು ?
ವೇದಿಕೆಯು ಸಿದ್ಧವಿದೆ ಹೆಸರು ಅವತರಣ
ಉದ್ದೇಶ ಒಳಿತಿಹುದು ಸಬಲೀಕರಣ
ಉತ್ಸಾಹ ಉಲ್ಲಾಸ ಮೈದುಂಬಿ ಬಂದು
ಹರಡಿ ದೇಶದ ತುಂಬ ಕೀರ್ತಿಯಾಸಿಂಧು
ನಡುವೆ ಬಾರದೆ ಇರಲಿ ಯಾವುದೇ ಕುಂದು
ಎಲ್ಲರನು ರಕ್ಷಿಸಲಿ ಆ ದೀನಬಂಧು
Creative Writings
