Karada Vishwa

News · October 12, 2026

ಅರ್ಚನಾ ಶ್ರೀರಾಮ್ ಕುಂಟಿಕಾನ ಅವರಿಂದ ಸೌಂಡ್ ಬಾತ್ ಮತ್ತು ಸೌಂಡ್ ಥೆರಪಿಯ ವಿಶೇಷ ಪ್ರಾತ್ಯಕ್ಷಿಕೆ

ಕರಾಡ ಮಹಿಳಾ ವೇದಿಕೆಯ ವತಿಯಿಂದ ನವರಾತ್ರಿ ಆನ್‌ಲೈನ್ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ, ಶ್ರೀಮತಿ ಅರ್ಚನಾ ಶ್ರೀರಾಮ್ ಕುಂಟಿಕಾನ ಅವರು ಸೌಂಡ್ ಬಾತ್ ಮತ್ತು ಸೌಂಡ್ ಥೆರಪಿ ಕುರಿತು ವಿಶೇಷ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ವಿವಿಧ ವಾದ್ಯಗಳು, ಗಂಟೆಗಳು ಹಾಗೂ ಸಿಂಗಿಂಗ್ ಬೌಲ್‌ಗಳಿಂದ ಹೊರಹೊಮ್ಮುವ ಸುಮಧುರ ಧ್ವನಿತರಂಗಗಳು ಮನಸ್ಸನ್ನು ಶಾಂತಗೊಳಿಸಿ, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯ ಅನುಭವ ನೀಡುವ ಬಗೆಯನ್ನು ಅವರು ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದರು. ಧ್ವನಿ ಮತ್ತು ಕಂಪನಗಳ ಮೂಲಕ ದೈನಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಮಾನಸಿಕ ಪ್ರಶಾಂತತೆಯನ್ನು ಅನುಭವಿಸಲು ನೆರವಾಗುವ ಈ ವಿಶಿಷ್ಟ ವಿಧಾನದ ಬಗ್ಗೆ ಭಾಗವಹಿಸಿದವರಿಗೆ ಆಸಕ್ತಿದಾಯಕ ಮಾಹಿತಿಯನ್ನು ನೀಡಿದರು.

ಧ್ವನಿತರಂಗಗಳ ಸುಮಧುರ ಅನುಭವವು ಮನಸ್ಸಿಗೆ ನೆಮ್ಮದಿ, ಉಲ್ಲಾಸ ಹಾಗೂ ಹೊಸ ಚೈತನ್ಯವನ್ನು ತುಂಬಿದಂತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಇದು ವಿಶಿಷ್ಟ ಮತ್ತು ಆಹ್ಲಾದಕರ ಅನುಭವವನ್ನು ನೀಡಿತು.

ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಅರ್ಚನಾ ಶ್ರೀರಾಮ್ ಕುಂಟಿಕಾನ ಅವರಿಂದಲೇ ಸೌಂಡ್ ಬಾತ್ ಮತ್ತು ಸೌಂಡ್ ಥೆರಪಿಯ ಪೂರ್ಣ ಪ್ರಮಾಣದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಕರಾಡ ಮಹಿಳಾ ವೇದಿಕೆಯು ಆಸಕ್ತರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಪ್ರಾತ್ಯಕ್ಷಿಕೆಯ ಕೆಲವು ತುಣುಕುಗಳು ......


Women