
News · October 7, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ನವರಾತ್ರಿ ಉತ್ಸವ 2026
ತಾರೀಕು 20.10.2026 ಮಂಗಳವಾರ ನವಮಿಯಂದು ಶ್ರೀ ಕ್ಷೇತ್ರದ ಪರಿಸರದ ಅಂಗಳದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ವಾಹನ ಪೂಜೆ ನಡೆಯಲಿರುವುದು. ಸೇವಾರ್ಥಿಗಳು ಸಮಯಕ್ಕೆ ಸರಿಯಾಗಿ ಬಂದು, ಶ್ರೀ ಕ್ಷೇತ್ರದ ಕಚೇರಿಯಿಂದ ರಶೀದಿಯನ್ನು ಪಡೆದು ಸೇವೆಗಳನ್ನು ಮಾಡಿಸಿಕೊಳ್ಳಬಹುದು.
ತಾರೀಕು 21.10.2026 ಬುಧವಾರ ದಶಮಿಯoದು 8 ಗಂಟೆಗೆ ಶ್ರೀ ಸರಸ್ವತಿ ಪೂಜೆಯು ಮಂಗಳಾರತಿಯೊಂದಿಗೆ ಸಂಪನ್ನಗೊಳ್ಳಲಿರುವುದು. ಈ ಶುಭ ಸಂದರ್ಭದಲ್ಲಿ ವಿದ್ಯಾರಂಭ ಮಾಡಲು ಬಯಸುವ ಸೇವಾರ್ಥಿಗಳು ಅಗತ್ಯವಾಗಿ ಉಪಸ್ಥಿತರಿರಬೇಕು. ತದನಂತರ 8.30 ಗಂಟೆಗೆ ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಶಂಕರ ನಾರಾಯಣ ಶರ್ಮ ಗೋಸಾಡ ಅವರ ನೇತೃತ್ವದಲ್ಲಿ ವಿದ್ಯಾರಂಭ ಪ್ರಾರಂಭವಾಗುವುದು.
1) 20.10.2026 ಮಂಗಳವಾರ ನವಮಿಯಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಶ್ರೀ ದೇವಿಗೆ ನವಾನ್ನ, ಪಾಯಸ ಸಮರ್ಪಣೆ. 8 ಗಂಟೆಯಿಂದ ಆಯುಧ ಪೂಜೆ.
2) 21.10.2026 ಬುಧವಾರ ದಶಮಿಯoದು ಬೆಳಗ್ಗೆ 8 ಗಂಟೆಯಿಂದ ಶಾರದಾ ಪೂಜೆಯ ಮಂಗಳ ಮತ್ತು ವಿದ್ಯಾರಂಭ.
ಎಲ್ಲರ ಸಹಕಾರವನ್ನು ಈ ಮೂಲಕ ಕೋರುತ್ತೇವೆ. ಹೆಚ್ಚಿನ ವಿವರಗಳಿಗೆ ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಬಹುದು.
ಧನ್ಯವಾದಗಳು.
