
Article · September 13, 2026
ಗಣಪ
ಸಂಧ್ಯಾ ಕೊರೆಕ್ಕಾನ
ಗಣಪಬಂದನು ಶಿವನ ತನಯನೆಂದನು
ಚೌತಿ ಹಬ್ಬ ಮಾತ್ರ ಇಲ್ಲಿ ನನ್ನದೆಂದನು
ಮೊದಲ ಪೂಜೆ ನನಗೆ ಸಲಲು ವಿಘ್ನ ಬಾರದು
ಉದ್ಧ ಸೊಂಡಿಲೊಂದು ನನಗೆ ಏನು ತೋರದು
ವಂದನೆಸಲಿಸುವರು ನನಗೆ ಏಕವಿಂಶತಿ
ನನಗೆ ಜೀವಕೊಟ್ಟವಳು ಅವಳೆ ಪಾರ್ವತಿ
ಕರೆವರೆಲ್ಲ ನನನ್ನು ಓ ಗಣಪತಿ
ಪೂಜಿಸಲು ಮಾಡಿರೆನ್ನ ಮಣ್ಣ ಮೂರುತಿ
ಇಷ್ಟ ನನಗೆ ಗರಿಕೆ ಹುಲ್ಲು ಕಡುಬು ಬೇಡುವೆ
ಕಷ್ಟನಿನಗೆ ಬರದಹಾಗೆ ನೋಡಿಕೊಳ್ಳುವೆ
ಅಷ್ಟ ಗಣಪ ನೆಂದು ನನ್ನ ಹಾಡಿ ಹೊಗಳಲು
ನಿಷ್ಟೆಯಿಂದ ಕುಳಿತುಬಿಡು ನನ್ನ ಸೇರಲು
Creative Writings
