
News · August 26, 2026
ಮಂಗಳೂರು ಕರಾಡ ಸಮಾಜ ಭವನದಲ್ಲಿ ಋಗ್ವೇದ ಉಪಾಕರ್ಮ ಸಂಪನ್ನ
ವರದಿ ಕೃಪೆ : ಜಯರಾಮ ಭಟ್ ಮಂಗಳೂರು
ಮಂಗಳೂರಿನ ಕರಾಡ ಸಮಾಜ ಭವನದಲ್ಲಿ ಋಗ್ವೇದ ಉಪಾಕರ್ಮವು ಭಕ್ತಿಭಾವದಿಂದ ಹಾಗೂ ಅಚ್ಚುಕಟ್ಟಾಗಿ ನೆರವೇರಿತು. ವೈದಿಕರಾದ ಶ್ರೀಕೃಷ್ಣ ಭಟ್ ಆವಳ ಮಠ ಅವರ ವೈದಿಕತ್ವದಲ್ಲಿ ಬೆಳಿಗ್ಗೆ 6:30ರಿಂದ 8:30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಒಟ್ಟು 32 ಮಂದಿ ಭಾಗವಹಿಸಿದ್ದರು.
ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನೆರವೇರಿದ ಬಳಿಕ, ಉಪಹಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಸಮಾಜ ಬಾಂಧವರ ಸಕ್ರಿಯ ಭಾಗವಹಿಸುವಿಕೆಯಿಂದ ಸಮಾರಂಭವು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬಂತು.




CommunityHeritage
