
Article · February 19, 2026
ಬೊಂಡ್ಯೇ ಭಜ್ಜಿ/ಬಾಳೆ ಹೂವಿನ ಪಲ್ಯ
- ರಕ್ಷಿತಾ ಭಟ್ ನುಳಿಯಾಲು
ದಾಯೆಂದಲ್ಲ ಸಾಮಗ್ರಿ/ ಅಗತ್ಯ ವಸ್ತುಗಳು
ಬೊಂಡಿ/ಬಾಳೆ ಹೂ:-1
ಲೋಣ/ಉಪ್ಪು:-ರುಚೀಕ/ರುಚಿಗೆ
ಗೋಡ/ಬೆಲ್ಲ :-ನೆಲ್ಲಿಕ್ಕಾಯಿ ಗಾತ್ರಾತ್ಸ/ನೆಲ್ಲಿಕಾಯಿ ಗಾತ್ರದಷ್ಟು
ಹಳದಿ ಫೂಡಿ/ಅರಿಸಿನ:-ಚಿಟಿಕೆ
ಮೀರ್ಯಾ ಫೂಡಿ/ಮೆಣಸಿನ ಪುಡಿ:-1/2 ಕೈಶೊ/1/2 ಚಮಚ
ಸೊಲ್ಲಂ/ಕೆತ್ತೆ ಹುಳಿ:-4-5
ಉದೊ/ನೀರು:-ಶಿಜ್ಜಾಕ ದಾಯೆಂದಲ್ಲ ಇತ್ತು/ಬೇಯಲು ತಕ್ಕ.
ತೇಲ/ಎಣ್ಣೆ:-4ಕೈಶೆ/4ಚಮಚ
ಸಾಸಮ/ಸಾಸಿವೆ:-2ಕೈಶೆ/2ಚಮಚ
ತಂದುಳ/ಅಕ್ಕಿ:-4ಕೈಶೆ/4ಚಮಚ
ಬೇವಾಪಲ್ಲೊ/ಕರಿಬೇವು:-ಇದ್ದು/ಸ್ವಲ್ಪ
ಕಸಂ ಕರಪ?/ಮಾಡುವ ವಿಧಾನ?
ಸುರುವೇಕ ಬೊಂಡಿ ಕಣ್ಙಣ್ಣು ತಜ್ಜೇಂಟು ವಿಂಗಡ ದಲ್ಲ ಪೂಂಬಾಳೆ ಒಟ್ಟು ಕಡ್ಡುನ್ನ,ಮಾಣ ಎಕ್ಕ ಪಾತ್ರಾನ್ನು ಉದೊ ಕಣ್ಙಣ್ಣು ತಾನ್ನು ಬೊಂಡಿ ಸಾನಿಕರ್ನು ತತ್ಸುನು ಘಲ್ಲುಂಚಿ(ಎಣ ಬೊಂಡ್ಯೇತ್ಸ ಕಣೇರ ಒಚ್ಚಾಕ ಸಹಾವೊ ದಾರ ಮಾಣ ಧುಲ್ಲಸಲೆ ದಾರ,ಹತ್ತಾಕ ಇದ್ದು ತೇಲ ಮಕ್ಖುಂಙಳ್ಳೆ ಹತ್ತಾಕಿಲೆ ಡೀಕು ದೈನ). ಮಾಣ ತತ್ಶಿಲ್ಲಿ ಬೊಂಡಿ ಕಾಣ್ಣು ಎಕ್ಕ ತವಾऽನ್ನು ಘಾऽನ್ನು ತಕ್ಕ ಲೋಣ, ಮೀರಿ,ಗೋಡ,ಸೊಲ್ಲಂ,ಉದೊ ಘಾನ್ನು ಶಿಜ್ಜಾಕ ದೇರುನ್ನ. ಕೋಳ್ತ್ಯಾ ರನ್ಹಣೀರಿ ಶಿಜ್ಜಾಕ ದೇರ್ಲೆ ಹದऽ ಉಜ್ಜಾರಿ ನೋಯೆದಲ್ಲೆ ಠಾಳೀರಿ ರೋಕ ಕರ್ಪಟऽ ಕರಾಕ ದಾರ, ರನ್ಹಣಿ ನತ್ಥಿಲ್ಲೇನಿ ಗ್ಯಾಸಾರಿ ದೇರ್ನುಲೆ ಕರ್ಯೇದ, ದಲ್ಲೆ ಥೈಂಚಿ ರಬ್ಭುನು ಪಳೋಂಙಣ್ಣು ಅತ್ಸುನ್ನದಾರ. ಸಮऽ ಕರ್ಪಟऽ ದಲ್ಲಾಮಾಣ ವಿತ್ತಸುಂಚ ಡೈಲಾನ್ನು ತೇಲ ಘಾನ್ನು ತೇ ತಪ್ಪತಣ ತಕ್ಕ ಸಾಸಮ,ತಂದುಳ,ಬೇವಾಪಲ್ಲೊ ಘಾನ್ನು ವಿತ್ತಶಿಲ್ಲೆ ಧಂಪ್ರಾರಂಚ ಪೆಜ್ಯೇ ಜವಣಾಕ ಬೊಂಡ್ಯೇ ಭಜ್ಜಿ ತಯಾರಿದಲ್ಲಿ. ಸಂಗತ ಅಂಬಾಡಾ ಗೊಜ್ಜು,ತೂಪ,ಕಡೇಕ ಕತ್ಸರಿಕಿ ಪಪ್ಪಡುಕಿ ಅಚ್ಛಿಲ್ಲೆ ಯಾ ಜವಣಾಚ ಫುಳ್ಳೆಂ ಖಂಚ 5* ಹೋಟೆಲಾ ಜವಣಲೆ ಯಾನ. ಹಕ್ಕ ಎಕ್ಕೀ ಬೊಂಡೀಚಿ ಘಲ್ಲುಂಚೀಣು ನೋಯೆ,ತುಂಚೇಣಿ ಅಚ್ಛಿಲ್ಲೆ ಇತ್ತು ತುಂತ ಘರಾಮುಳ್ಳ ಜನಾಂಕ ಹೊಂದುಪುಙಣ್ಣು ಉಪಯೋಗು ಕರಾ,ತಸಂ ದಂತಣತಕ್ಕ ಘಲ್ಲುಂಚ ಸಾಮಗ್ರೀತ್ಸ ಪ್ರಮಾಣ ಅಧಿ ಕೆಲ್ಲೆ ದಲ್ಲಂ.
(ಮೊದಲಿಗೆ ಬಾಳೆ ಹೂವನ್ನು ತಗೊಂಡು ಅದರಿಂದ ಬೇರ್ಪಟ್ಟ ಎಸಳುಗಳನ್ನು ತೆಗೆದು ಆಚೆ ಹಾಕಿ,ನಂತರ ಹೂವನ್ನು ಸಣ್ಣಕ್ಕೆ ಹೆಚ್ಚಿ ಒಂದು ಪಾತ್ರೆಯಲ್ಲಿ ನೀರನ್ನು ತಗೊಂಡು ಅದರಲ್ಲಿ ಹಾಕಿ (ಇದರಿಂದ ಅದರ ಮಯಣ ಹೋಗಲು ಸುಲಭವಾಗುತ್ತದೆ ಹಾಗೂ ತೊಳೆದಹಾಗೂ ಆಗುತ್ತದೆ,ಕೈಗೆ ಚೂರು ಎಣ್ಣೆ ಪಸೆ ಮಾಡುವುದರಿಂದ ಮಯಣ ಕೈಗೆ ಅಂಟದಿರುವುದಕ್ಕೆ ಸಹಾಯವಾಗುತ್ತದೆ).ನಂತರ ಹೆಚ್ಚಿದ ಹೂವನ್ನು ನೀರಿಂದ ತೆಗೆದು ಒಂದು ಬಾಣಲೆಯಲ್ಲಿ ಹಾಕಿ ಅದಕ್ಕೆ ಉಪ್ಪು,ಬೆಲ್ಲ, ಅರಿಸಿನ, ಮೆಣಸಿನ ಪುಡಿ, ಕೆತ್ತೆ ಹುಳಿ ನೀರು ಹಾಕಿ ಬೇಯಲು ಇಡಿ.ಬೆಂದ ನಂತರ , ಒಗ್ಗರಣೆ ಸೌಟಿನಲ್ಲಿ ಎಣ್ಣೆ ಇಟ್ಟು ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು,ಹಾಗೂ ಅಕ್ಕಿ ಹಾಕಿ ಒಗ್ಗರಣೆ ಕೊಟ್ರೆ ಮಧ್ಯಾಹ್ನದ ಊಟಕ್ಕೆ ಕುಚ್ಚಲಕ್ಕಿ ಗಂಜಿಗೆ ಬಾಳೆ ಹೂವಿನ ಪಲ್ಯ ತಯಾರು.ಜೊತೆಗೆ ಅಂಬಟೆ ಗೊಜ್ಜು,ತುಪ್ಪ, ಹಾಗೂ ಪಕ್ಕದಲ್ಲಿ ಸಂಡಿಗೆ/ಹಪ್ಪಳ ಇದ್ದಲ್ಲಿ ಈ ಊಟದ ರುಚಿಯ ಮುಂದೆ ಯಾವ 5* ಹೋಟೆಲ್ಲಿನ ಊಟಾನೂ ಬರಲ್ಲ...
ಇದಕ್ಕೆ ಒಂದೇ ಬಾಳೆ ಹೂ ಹಾಕಬೇಕೆಂದಲ್ಲ, ನಿಮ್ಮಲ್ಲಿ ಇದ್ದಷ್ಟು ನಿಮ್ಮ ಮನೆಯ ಸದಸ್ಯರಿಗೆ ಹೊಂದಿಕೊಂಡು ಮಾಡಿ.ಹಾಗೆ ಮಾಡಿದಲ್ಲಿ ಅದಕ್ಕೆ ಹಾಕುವ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡಿ ಕೊಳ್ಳಿ.)


Food
