Karada Vishwa

Article · November 6, 2026

ಬೃಂದಾವನ

ವೀಣಾ ಎಂ ಭಟ್

ಮನೆಯು ಬೃಂದಾವನವು ಹರುಷವು ಇರುವಲ್ಲಿ

ಮನವು ದೇವಾಲಯವು ಹೃದಯದ ಒಲವಲ್ಲಿ

ಬಾಳ ದೋಣಿಯ ಪಥವು ಹೊಂಗನಸ ತೀರದಲಿ

ಬಾನಾಡಿಯಾಗಿ ಬಾಂದಳದೆ ಹಾರಾಡುತಲಿ

ಸತಿಪತಿಯ ಸಹನೆಯು ಗತಿಯು ಮುನ್ನಡೆವಲ್ಲಿ

ಹಿತವಾದ ಅನುಭವ ಆಸರೆಯು ಮಡಿಲಲ್ಲಿ

ಶಾಂತಿಯುತ ಜೀವನ ನೀತಿಯ ನಡೆಯಲ್ಲಿ

ಕ್ರಾಂತಿಗೆ ಮಣಿದಾಗ ಸುಖ ಶಾಂತಿ ಇನ್ನೆಲ್ಲಿ

ಕಂಡೂಕಾಣದ ತರ ನಡೆಯಿರಲು ಗೃಹನಾಥ

ಕೊಂಡೊಯ್ಯುವ ಗುರಿಗೆ ಗೃಹವ ಆ ನಾಥ

ಎಂದಾದರೊಂದು ದಿನ ಸಹನೆ ಕಟ್ಟೊಡೆದಾಗ

ಹೊಂದಲಾರದೆ ತದಕಿ ಎಸೆಯುವರು ಹೊರಗೆ

ತುಂಬು ಸಂಸಾರದ ನೊಗ ಹೊತ್ತು ಸಲಹಿದವ

ಇಂಬು ಬಂದಾಗ ಇಂದು ಯಾರಿಗೂ ಬೇಡದವ

ನಿಸ್ಸಾರವಾಯಿತೆ ಇಂದು ಒಂದು ದಿನದ ನಡೆಗೆ

ಬೆತ್ತಲಾಯಿತೆ ಬದುಕು ನೋಡುವ ಕಂಗಳಿಗೆ

Creative Writings