Karada Vishwa

Article · July 8, 2026

ಕರಾಡದಿಗ್ಗಜನಿಗೆ ಕಾವ್ಯನಮನ...

--ಕವಿಗಳು, ಕರಾಡ ಕಾವ್ಯಾಂಜಲೀ ಬಳಗ

ಸೇತುಬಂಧ

ಪಯಸ್ವಿನಿಯ ದಡದಲ್ಲಿ

ಕಂಬನಿಯ ಕಡಲು..

ಅನಾಥವಾಗಿದೆ ಮೊದಲ

ತೂಗು ಸೇತುವೆಯು

ನಿಮ್ಮ ಅಗಲಿಕೆಯಿಂದ

ಶೋಕ ತಪ್ತ ಜನ

ಹಳ್ಳಿ ಬದುಕಿಗೆ ನಿಮ್ಮ

ಕೊಡುಗೆಯು ಅನನ್ಯ

ಪದ್ಮಶ್ರೀ ಗಿರೀಶಣ್ಣ,

ಗಿರಿಶಿಖರವನ್ನೂ ಮೀರಿದ

ನಿಮ್ಮ ಸಾಧನೆಯ ಎತ್ತರ

ಜನರ ಹತ್ತಿರ ಕೂರಿಸುವಷ್ಟು ಸರಳ

ನಿಮ್ಮ ಸೌಜನ್ಯ

ಸೌಮ್ಯತೆಯ ಸಾಕಾರ ಮೂರ್ತಿ

ಸಜ್ಜನ ಬಂಧು, ಸದಾ ಹಸನ್ಮುಖಿ

ಆರಂಭ ಪಯಸ್ವಿನಿಯ ಸೇತುಬಂಧ

ನದಿ, ಹಳ್ಳ, ತೋಡು

ಮಳೆ ನೀರಿನ ಪ್ರವಾಹ

ಇಕ್ಕೆಲದ ಜನರ ಸಂಪರ್ಕ ನಾಶ

ನದಿ ಪ್ರಕೃತಿಯ ಜೀವನಾಡಿ

ನಾವೂ ನಮ್ಮವರು ಕೂಡಿ

ದಡದಿಂದ ದಡಕ್ಕೆ

ಕೈ ಹಿಡಿದು ಕರೆದೊಯ್ಯಲು

ನೀವು ಕಟ್ಟಿದ ತೂಗು ಸೇತುವೆಗಳು

ಮಕ್ಕಳಿಗೆ ಶಾಲೆಗೆ ಹೋಗಲು

ನಮಗೆ ಬದುಕಿನ ಬಂಡಿ ಸಾಗಲು

ದೂರ ದೂರದ ಊರು

ಭಾಷೆ ಬೇರೆ, ಸಂಶಯದ ತವರು

ಕೆಲವೆಡೆ ಹುಳ-ಜಿಗಣೆಗಳ ನೆಲ

ನಕ್ಸಲರ ಬೇರು

ಅಲ್ಲಿಯೂ ಸೇತುವೆ ಕಟ್ಟಿದವರು

ಜನಸಂದಣಿಯಿಂದ ದೂರ

ದಟ್ಟ ಕಾನನದ ನಡುವೆ

ನದಿ ತಟವೇ ಕರ್ಮಭೂಮಿ

ಅಲ್ಲೇ ಊಟ, ಅಲ್ಲೇ ನಿದ್ದೆ,

ಧ್ಯಾನ ಸೇತುವೆಯದ್ದೇ

ಹೃದಯದಿಂದ ಹೃದಯ ಬೆಸೆದಿರಿ

ಕರಗಿ ಕಾಲಿಗೆರಗಿದ ನಕ್ಸಲರು

ಹರಸಿದರು ನೂರಾರು ಹಳ್ಳಿಗರು

ತೂಗು ಸೇತುವೆಗಳ ಸರದಾರ

ಹೃದಯ ಹೃದಯಗಳ

ಸಂಪರ್ಕ ಬೆಸೆದ ಹರಿಕಾರ

ಪದ್ಮಶ್ರೀ ಒಲಿದ ಪುರಸ್ಕಾರ

ಈಗ ಕಣ್ಣಲ್ಲಿ ಕಂಬನಿ

ಅಂತಿಮ ನಮಸ್ಕಾರ

( ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ದಿ. ೦೭/೦೭/೨೦೨೬)

✍️ಚಂದ್ರಹಾಸ ಕನ್ನಡ್ಕ


ಹೋಡು! 🙏🙏🙏

ಔಂಚ ಮಜ್ಝಿಲ್ಲೊ 'ಸೇತುಬಂಧು',

ಎತ್ತರತ್ಸೊ 'ಮಾಡು'; |

ನೈಂಕ ದೆಡ್ಡಶಾಂಚಿ ಓರಿ ಸಂಕಂ

ಬಂದಿಲ್ಲೊ ಹೋಡು! ||

ಈ 'ಸಮಾಜ ಸೇವ' ವಿಸರ್ನಂತಿ,

ಸಂಶಯೊ ನಕ್ಕ; |

ತುಜ್ಜೇಂಟುಂ ಕರಾಡಾಕಿಲೆ ಮೇಳ್ಳಿ

ಕೀರುತಿ ಎಕ್ಕಸಕ್ಕ! ||

✍🏼 ರವೀ ಸಜಂಗದ್ದೆ (07/07/26)


ದಯಾನಿಧಿ

ಐಲ್ಯ ಫಾಳಿಟುಂ ಪೆಲ್ಯ ಫಾಳಿ ಕಡ್ಪ್ಯಾಕ

ಫೊಪ್ಪಾಳಂ ಬಂದಿಲ್ಲಂ ಪರ್ತುಂ ತೆಣಿ ಯಾಕ..

ನಿಸ್ವಾರ್ಥೆಂ ಕೆಲ್ಲಿ ತೆಣ ಸಮಾಜ ಸೇವ

ರೊಕ್ಕ ಕೆಲಸೆನ ಓರ್ಲೆ ಸಾಸಾದಿ ಜೀವ

✍🏼 ಸಂಧ್ಯಾಗೀತಾ ಬಾಯಾರು (07/07/26)


ಗಿರೀಶಣ್ಣಾಣಿ🙏

ಕಸಣು ವಿಸರಪ ಅಣ್ಣ ಥುತ್ತಂ ಫೊಪ್ಪಾಳಂ I

ಸಂಬಂಧು ಕೂಳ್ಳೊತ್ಸ ಬಂದಿಂತ್ಸ " ಪಾಳಂ" II

ಔಙ ಕರ್ಹಾಡಾಂಕ ತುಜ್ಜೇಂಟುಂ ನಾವಂ I

ಪದ್ಯೇನ ಹಾದ್ದೋಡಿ ಕರ್ಙಡ್ರಂ ಹಾವಂ II

✍🏼ರಾಮಣ್ಣ ಚೆನ್ನಾಂಗೋಡು (07/07/26)


ಗಿರೀಶಣ್ಣ ಮ್ಹಳ್ಳೇರಿ...

ಗಿರೀಶಣ್ಣ ಮ್ಹಳ್ಳೇರಿ ತೂಗು ಸೇತುವೆ ಸರದಾರು

ವಿಸರಪ ಕಸಂ ಅತ್ತo ತೆಣ ಕೆಲ್ಲೊ ಉಪಕಾರು

ಬಂದಿಲ್ಲೆ ಸಂಕ ತೆಣ ವೀರೆ ವೀರಾoಕ

ಸಂಗತ ದೌo ಗೆಲ್ಲೆ ಸಂಕ ಔoಥೆ ಮನ ಮನಾoಕ.. ll

ಪದ್ಮಶ್ರೀ ಪುರಸ್ಕಾರು ತೋ ತಥ್ಯಾ ಯಾ ಕೆಲಸಾಕ

ಮೇಳ್ಳಸಂ ದಲ್ಲo ವಳೇ ಔoತ್ಯ ಸಮಾಜಾಕ

ರೊಕ್ಕಾoಕ ದೇವು ತೋ ವೆಗ್ಗಿo ಹರ್ರಣು ಮ್ಹಳ್ಳo

ಉಲ್ಲಣೆ ನಿಜ ದಲ್ಲo ತಕ್ಕ ದೇವೇನ ಹಿಲ್ಲo ll

✍🏼 ನಳಿನಿ ಸೈಪಂಗಲ್ಲು (07/07/26)


ಗಿರೀಶಣ್ಣ

ಸೌಮ್ಯ ಹಾಸಲೆಂ ತತ್ಥಂ ದೀಸುನ್ನಂ ತಥ್ಯ

ಪ್ರಾಮಾಣಿಕತನಾಂಚಂ ಏಕ ಚಿಕಿತ್ಸಕ ನೋಟ

ಹಕ್ಕಂಡಾಂಕಿ ತೋ ಏಕು ಹೊಳ್ಳೊ ಅಣ್ಣ

ದೇವು ದೆವು ಸದ್ಗತಿಲೆ ಚಿರಶಾಂತಿ ನಿತ್ಯ

ಓಂ ಶಾಂತಿ

✍🏼 ಶ್ರೀ ಹರಿ ಭಟ್ ಪೆಲ್ತಾಜೆ


ಪದ್ಮಶ್ರೀ ಬಿರುದಾಂಕಿತ ಗಿರೀಶ್ ಭಾರದ್ವಾಜ್ ಗೆ ನಮನ

ನಮ್ಮ ಸಮಾಜದ ಮುಕುಟ ಪ್ರಾಯ

ಸೇತುವೆ ಕಟ್ಟಿದ ಸರದಾರ

ಆ ದಡ ಈ ದಡ ಬಂಧಿಸಿ ಬಿಟ್ಟರು

ಜನತೆಗೆ ಬಹುವಿಧ ಉಪಕಾರ ।

ಸುಸಂಸ್ಕೃತ ಸಜ್ಜನ ಬಾಂಧವರಿವರು

ಆಯಶ್ಶಿಲ್ಪದ ರೂವಾರಿ

ಬೆಸುಗೆಯ ಒಡನಾಟವು ಜನರಲ್ಲಿ

ಪದ್ಮಶ್ರೀ ಬಿರುದು ಧಾರಿ ।

ಕರೆವರು ಸೇತುಬಂಧು ಕರಾಡ ಸಮಾಜದ ಬಂಧು

ಸಮಾಜ ಸೇವೆಗೆ ಮುಂದು ವೃತ್ತಿಯಲ್ಲಿ ಸಿಂಧು

ದೇಶದುದ್ದಗಲದಲಿ ಹರಡಿಹುದು ಕೀರ್ತಿ

ಬಯಸುವೆ ಸಿಗಲೆಂದು ಅವರ ಆತ್ಮಕ್ಕೆ ಶಾಂತಿ ।

✍🏼ಸಂಧ್ಯಾ ಕೊರೆಕ್ಕಾನ


ಸೇತುಬಂಧದ ಸರದಾರ.. ದಾಟಿ ಹೋದನು ಬಹುದೂರ

ತೊರೆಯು ಹೊಳೆ, ನದಿಗಳಿಗೆ ಸೇತುವೆ

ನಿರ್ಮಿಸಿದ ಸರದಾರನು

ತಾನೇ ನಿರ್ಮಿಸಿದಂಥ ಸೇತುವೆ

ಮೇಲೆ ಏರದೆ ಹೋದನು //

ಅವನಿಗೆಂದೇ ಹೊಸತು ಸೇತುವೆ

ದೇವ ನಿರ್ಮಿಸಿ ಕೊಟ್ಟನು

ಅದನು ಏರುತ ಭವದ ಸಾಗರ

- ವನ್ನೆ ದಾಟಿ ಬಿಟ್ಟನು//

ದ್ವೇಷ ಮತ್ಸರ ಏನು ಇಲ್ಲದೆ

ಸೇತು ಬಂಧವ ನಿರ್ಮಿಸಿ

ತಾನು ಮಾತ್ರಾ ಹೊರಟು ಹೋದನು

ಎಲ್ಲರೊಲವನು ಸೇವಿಸಿ//

ಅವನು ನಿರ್ಮಿಸಿದಂಥ ಸೇತುವೆ

ಹೊಳೆಗೆ, ನದಿಗೆ ಮಾತ್ರವೆ?

ಹೃದಯ ಹೃದಯಗಳೊಳಗೆ ಸೇತುವೆ

ಬೆರೆಸಿ ಹೋಯಿತು ಆತ್ಮವೆ//🙏🙏

✍🏼ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ


ಸೇತುವೆ-ಹೇತುವೆ?

ಗಿರೀಶಣ್ಣ ನಿರ್ಮಿಸಿ ತೂಗುಸೇತುವೆ

ಪದ್ಮಶ್ರೀ ಪ್ರಶಸ್ತಿ ಸಿಗಲು ಇದು ಹೇತುವೆ?

ಸರಕಾರೀ ಗೌರವ ಮರ್ಯಾದೆ ಪ್ರಾಪ್ತಿ

ಅಗಲಿದ ಆತ್ಮಕ್ಕೆ ತೃಪ್ತಿ, ಸಿಗಲಿ ಸ್ಥಿರಶಾಂತಿ

✍🏼 ರಾಧಾಕೃಷ್ಣಭಟ್ , ಕುರುಮುಜ್ಜಿ

Creative Writings