Karada Vishwa

Article · April 20, 2026

ಮುಕ್ತಕಗಳು

- ಜಯಶ್ರೀ ಕೆ ಆರ್ ಭಟ್ , ಪಳ್ಳತಡ್ಕ

ನಿತ್ಯ ಪೂಜೆ


ನಿತ್ಯ ಪೂಜೆಯು 
ಮನೆಗೆ ಶ್ರೇಯಸ್ಕರ, 
ದೇವರೊಲುಮೆಯು
ಮನೆಯ ಹಿತಕೋಸ್ಕರ!

 ಅಕ್ಷರ


ಸ್ಲೇಟು ಬಳಪ ಹಿಡಿದು ಮಗುವು 
ಬರೆದು ಮೊದಲ ಅಕ್ಷರ,
ಓದಿ ಬರೆದು ಕಲಿತ ಮೇಲೆ
ಮಗುವು ತಾನು ಸಾಕ್ಷರ!

ಯಾರು?


ವೃಕ್ಷ ಒಂದಿತ್ತಲ್ಲಿ ಅದು ದೇವದಾರು,
ಅನುಮಾನ ಕಾಡುತಿದೆ ಕಡಿದವರು ಯಾರು?    
ನೆರಳಾಗಿ ನಿಂತಿತ್ತು ದಣಿದವನ ಸೂರು
ಆಶ್ರಯವ ಪಡೆದಿತ್ತು ಹಕ್ಕಿ ಹಲವಾರು 

ಮೊಗ್ಗು


ನಾಲಗೆಯ ಮೇಲಿಹುದು 
ಹಲವು ರುಚಿ ಮೊಗ್ಗು,
ರುಚಿಯ ತಿಳಿಸುವುದು ಇದು
ಅದಕೆನಗೆ ಹಿಗ್ಗು.

 ಸೃಷ್ಟಿ


                ಸೃಷ್ಟಿಕರ್ತನ ಸೃಷ್ಟಿ ಅಪರಿಮಿತ ಕಲೆಗಾರ                   
ಏನು ಸೌಂದಯ೯ವಿದೆ ಸೃಷ್ಟಿಯೊಳಗೆ,
ಅದ್ಭುತದ ಸೌಂದಯ೯, ಅದ್ಭುತದ ಚಿತ್ತಾರ 
ಮೂಡಿ ಬಂದಿದೆ ಬರೆದ ಚಿತ್ರದೊಳಗೆ 
Creative Writings
ಮುಕ್ತಕಗಳು