
News · December 23, 2025
ಕುಮಾರಿ ಶ್ರೀ ಲಕ್ಷ್ಮಿ ಮಠದಮೂಲೆ ಅವರಿಗೆ ಅಭಿನಂದನೆಗಳು
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ್ಯದರ್ಶಿಯಾಗಿ ಆಯ್ಕೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಘಟನೆಯಾದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ್ಯದರ್ಶಿಯಾಗಿ ಆಯ್ಕೆಯಾದ ಕುಮಾರಿ ಶ್ರೀ ಲಕ್ಷ್ಮಿ ಮಠದಮೂಲೆ ಅವರಿಗೆ ಕರಾಡ ವಿಶ್ವದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಇವರು ಪುರುಷೋತ್ತಮ ಭಟ್ ಮಠದಮೂಲೆ ಮತ್ತು ಗಿರಿಜಾ ಭಟ್ ದಂಪತಿಯ ಪುತ್ರಿ .
ವಿಜ್ಞಾನ ಹಾಗೂ ಕಾನೂನು ಶಿಕ್ಷಣದೊಂದಿಗೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ವ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ, ಸಾಹಿತ್ಯ–ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯ ಸೇವೆ ಸಲ್ಲಿಸಿ, ವಿವಿಧ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡಿಸಿರುವ ಇವರ ಸಾಧನೆ ಅತ್ಯಂತ ಶ್ಲಾಘನೀಯವಾಗಿದೆ. ಪತ್ರಿಕೋದ್ಯಮ, ಸಂಗೀತ, ನೃತ್ಯ, ಭಾಷಣ ಮತ್ತು ಅಧ್ಯಯನ ಕ್ಷೇತ್ರಗಳಲ್ಲಿ ಇವರ ಬಹುಮುಖ ಪ್ರತಿಭೆ ಯುವ ಪೀಳಿಗೆಗೆ ಪ್ರೇರಣೆಯಾಗಿದೆ.
ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಯಲ್ಲಿ ಶ್ರೀಲಕ್ಷ್ಮೀ ಇನ್ನಷ್ಟು ಎತ್ತರಕ್ಕೇರಲಿ ಎಂಬ ಹಾರೈಕೆಯೊಂದಿಗೆ —
ಕರಾಡ ವಿಶ್ವದ ಹಾರ್ದಿಕ ಅಭಿನಂದನೆಗಳು.
