
News · November 11, 2026
ಭರತನಾಟ್ಯದಲ್ಲಿ ವಿದ್ವತ್ - ಕು . ಶರಣ್ಯ ಮಾಳಿಗೆಮನೆ
ಕರಾಡ ವಿಶ್ವದ ಅಭಿನಂದನೆಗಳು
ಕರಾಡ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿನಿ ಶರಣ್ಯ ಮಾಳಿಗೆಮನೆ ಅವರು ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಮ್ಮೆಯ ಸಂಗತಿ.
ಸಂತೋಷ್ ಕುಮಾರ್ ಮಾಳಿಗೆಮನೆ ಮತ್ತು ರಶ್ಮಿ ಕೆ. ದಂಪತಿಯ ಪುತ್ರಿಯಾಗಿರುವ ಶರಣ್ಯ ಅವರು, ಮಂಗಳೂರಿನ ಸನಾತನ ನಾಟ್ಯಾಲಯದ ಗುರುಗಳಾದ ಕರ್ನಾಟಕ ಕಲಾಶ್ರೀ ಶ್ರೀಮತಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ನಿಂದ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ಪದವಿ ಪಡೆದಿರುವ ಇವರು, ಪ್ರಸ್ತುತ ಬೆಂಗಳೂರಿನ ಪದ್ಮಶ್ರೀ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಬ್ಯಾಚುಲರ್ ಆಫ್ ಪಬ್ಲಿಕ್ ಹೆಲ್ತ್ ವ್ಯಾಸಂಗ ಮಾಡುತ್ತಿದ್ದಾರೆ. ಇದರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಕೇರಳ ಹಾಗೂ ಕರ್ನಾಟಕದಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ಸನಾತನ ನಾಟ್ಯಾಲಯದ ನೃತ್ಯ ರೂಪಕಗಳಾದ 'ಪುಣ್ಯ ಭೂಮಿ ಭಾರತ ', ಶಬರಿ,' ಸತ್ಯನಾಪುರತ ಸಿರಿ' ಇವುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹಾಗೆಯೇ ಜೂನಿಯರ್, ಸೀನಿಯರ್, ಪೂರ್ವ ವಿದ್ವತ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಎಲ್ಲ ಪರೀಕ್ಷೆಗಳಲ್ಲಿಯೂ ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಶೈಕ್ಷಣಿಕ ಆಸಕ್ತಿಯ ಜೊತೆಗೆ ಕಲೆ ಮತ್ತು ಸಂಸ್ಕೃತಿಯ ಮೇಲಿನ ಒಲವನ್ನು ಬೆಳೆಸಿಕೊಂಡು, ಭರತನಾಟ್ಯದಲ್ಲಿ ವಿದ್ವತ್ ಪದವಿ ಗಳಿಸಿರುವ ಶರಣ್ಯ ಅವರ ಸಾಧನೆ ನಿಜಕ್ಕೂ ಪ್ರಶಂಸನೀಯ.
ಇವರ ಕಲಾಸಾಧನೆಯ ಪಯಣ ಇನ್ನಷ್ಟು ಉನ್ನತ ಶಿಖರಗಳನ್ನು ತಲುಪಲಿ, ಭವಿಷ್ಯದಲ್ಲಿ ನಾಡಿನ ಹೆಮ್ಮೆಯ ಕಲಾವಿದೆಯಾಗಿ ಬೆಳಗಲಿ ಎಂದು ಹಾರೈಸುತ್ತಾ ಕರಾಡ ವಿಶ್ವವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.




