Karada Vishwa

Article · December 30, 2025

ನಾವು ಕರಾಡರು

✍️ ಶೈಲಜಾ ಭಟ್



ತಲೆಮಾರಿನಿಂದ ಬಂದ ನಮ್ಮ ಗುರುತಿನ ಮಾನ
'ಕರಾಡ'ವೆಂಬುದು ನಮ್ಮ ಹೆಮ್ಮೆ ನಮ್ಮ ಅಭಿಮಾನ
ಕರಾಡದಿಂದ ಬಂದು ಕರಾವಳಿಯಲ್ಲಿ ನೆಲೆಸಿ
ದೂರದೂರಿಗೂ ಹೋದೆವು ಉದ್ಯೋಗವನ್ನು ಅರಸಿ

ಪೌರೋಹಿತ್ಯ, ಅಡುಗೆಯ ನಂಬಿದೆವು ಬದುಕಲ್ಲಿ
ಕೃಷಿ ,ವ್ಯಾಪಾರವ ಮಾಡಿದೆವು ಕುಲಕಸುಬಿನ ಜೊತೆಯಲ್ಲಿ
ವಿದ್ಯೆ- ಬುದ್ಧಿಯಲ್ಲಿ ನಾವೆಲ್ಲ  ಶ್ರೀಮಂತರು 
ಉದ್ಯೋಗ, ವ್ಯವಹಾರದಲ್ಲೂ ನಾವಿಂದು ಪ್ರವೀಣರು
 
ಶೃಂಗೇರಿ ಶಾರದೆಯು ಇರಲು ನಮ್ಮ ಜೊತೆಯಲ್ಲಿ
ಯಾವುದೇ ತೊಡಕಿಲ್ಲ  ಕೈಗೊಂಡ ಕಾರ್ಯದಲ್ಲಿ
ದುರ್ಗೆ, ಅನ್ನಪೂರ್ಣೆಯರು ನೆಲೆಸಿರಲು ಮನದಲ್ಲಿ
ಅಂಜಿಕೆ, ಭಯವಿರದು ನಾವಿಟ್ಟ ಗುರಿಯಲ್ಲಿ

ಸಂಸ್ಕೃತಿ, ಸಂಪ್ರದಾಯಗಳ ಜೊತೆ ಕಟ್ಟಿರಲು ಬದುಕು
ನಮ್ಮ ಆಚಾರ ವಿಚಾರಗಳೇ ನಮ್ಮನೆಯ ಬೆಳಕು
ಪದ್ಧತಿಗಳ ಅನುಸರಿಸಿ, ರೂಢಿಗಳ ಅನುಕರಿಸಿ
ಬೆಳೆಸೋಣ ನಮ್ಮ ಪರಂಪರೆಯ  ಬೆಳಕಂತೆ ಪಸರಿಸಿ
          
       
Creative Writings
ನಾವು ಕರಾಡರು