
News · May 26, 2026
ಕೇರಳ SSLC ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳು..
ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.
ಕರಾಡ ಸಮುದಾಯದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಶಿಸ್ತಿನಿಂದ ನಿರಂತರವಾಗಿ ಸಾಧನೆ ಮಾಡುತ್ತಿದ್ದು, ಇತ್ತೀಚೆಗೆ ನಡೆದ ಕೇರಳ SSLC ಪರೀಕ್ಷೆಯಲ್ಲೂ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಗ್ರೇಡ್‌ಗಳೊಂದಿಗೆ ತೇರ್ಗಡೆಯಾಗಿ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.
ವಿಶೇಷವಾಗಿ, ಎಲ್ಲಾ 10 ವಿಷಯಗಳಲ್ಲೂ A+ ಗ್ರೇಡ್ ಪಡೆದು ಗಮನಾರ್ಹ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.
ಇವರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಗುರುಗಳ ಮಾರ್ಗದರ್ಶನವು ಇನ್ನಷ್ಟು ಉನ್ನತ ಸಾಧನೆಗಳತ್ತ ಸಾಗಲು ದಾರಿದೀಪವಾಗಲಿ. ಎಲ್ಲಾ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯ ಉಜ್ವಲವಾಗಿರಲಿ ಎಂಬುದು ಕರಾಡ ವಿಶ್ವದ ಹಾರೈಕೆ.
💐 ಶರಧಿ ಜಿ. ಭಟ್

ಪೊಯ್ಯೆ ಮನೆತನದ ಶರಧಿ ಜಿ ಭಟ್ ಅವರು ಗುರುಪ್ರಸಾದ ಪಿ ಹಾಗೂ ಮಧುರ ಕೆ ಎಂ ದಂಪತಿಯ ಪುತ್ರಿ. ಇವರು ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ವಿದ್ಯಾರ್ಥಿನಿ. ಶರಧಿ ಅನೇಕ ವಿಷಯಗಳಲ್ಲಿ ಪರಿಣಿತಿ ಇರುವ ಓರ್ವ ಪ್ರತಿಭಾವಂತ ವಿದ್ಯಾರ್ಥಿನಿ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ.
📚ಶರಧಿ ಅವರ ಇತರ ಸಾಧನೆಗಳು:
✨ Olympiads Exam ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ
✨ ಕೇರಳ ಸರ್ಕಾರದ LSS (CM Kids Scholarship) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ Scholarship ಗೆ ಅರ್ಹತೆ
✨ ಗಮಕ ಕಲಾ ಪರಿಷತ್ತಿನ ಗಮಕ ಪ್ರಥಮ, ಪ್ರವೇಶ, ಪ್ರೌಢ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ ಹಾಗೂ ಗಮಕ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರಾಂಕ್
✨ ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಶ್ರೇಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗಿ ಸೀನಿಯರ್ ಅಭ್ಯಾಸ ಮುಂದುವರಿಸಿದ್ದಾರೆ
✨ ಹಲವಾರು Chess Tournament ಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ A Grade ಪಡೆದಿದ್ದಾರೆ
✨ ಭಾರತ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ ರಾಮಾಯಣ ಪರೀಕ್ಷೆಯಲ್ಲಿ (99/100) ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ
✨ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾಲಯ, ಕಾಲಟಿ ನಡೆಸಿದ ಸಂಸ್ಕೃತ ಪರೀಕ್ಷೆಯಲ್ಲಿ A Grade ಗಳಿಸಿದ್ದಾರೆ
✨ ಶಾಲಾ ಹಾಗೂ ಸಬ್-ಜಿಲ್ಲಾ ಕಲೋತ್ಸವಗಳಲ್ಲಿ ಸಂಗೀತ, ನಾಟಕ, ಕಂಠಪಾಠ ಹಾಗೂ Seminar ಸ್ಪರ್ಧೆಗಳಲ್ಲಿ A Grade ಸಾಧನೆ ಮಾಡಿದ್ದಾರೆ.

💐 ದಿಗಂತ್ ಕೆ.

ಉಪ್ಪಂಗಳ ಮೂಲೆ ಮನೆತನದ ದಿಗಂತ್ ಕೆ ಅವರು ಗಣಪತಿ ಭಟ್ ಹಾಗೂ ದಿವ್ಯಾ ಭಟ್ ದಂಪತಿಯ ಪುತ್ರ. ಇವರು ಅಗಲ್ಪಾಡಿಯ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ (S.A.P.H.S. Agalpady) ಯ ವಿದ್ಯಾರ್ಥಿ. ದಿಗಂತ್ ಶೈಕ್ಷಣಿಕವಾಗಿ ಮುಂದಿದ್ದು ಜೊತೆಗೆ ಸ್ಕೌಟ್ ವಿಭಾಗದಲ್ಲಿ ರಾಜ್ಯ ಪುರಸ್ಕಾರ ಪಡೆದ ಸಾಧನೆಯೂ ಇವರದು .
💐 ಅನುಶ್ರೀ ಕೆ.

💐 ಪ್ರಣವ್ ಪಿ.

ಪೊಯ್ಯೆ ಮನೆತನದ ಪ್ರಣವ್ ಪಿ ಅವರು ರಾಧಾಕೃಷ್ಣ ಭಟ್ ಹಾಗೂ ಶಶಿಕಲಾ ಭಟ್ ದಂಪತಿಯ ಪುತ್ರ. ಇವರು ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿ. ಪ್ರಣವ್ ಚಿತ್ರಕಲೆಯಲ್ಲೂ ನುರಿತವರು. ಉದಯವಾಣಿ ಆಯೋಜಿಸಿದ ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಹಾಗೆಯೇ ಶಾಸ್ತ್ರ ಮೇಳದ ಕರಕುಶಲ ವಿಭಾಗದ ಮೆಟಲ್ ಎಂಬೋಸಿಂಗ್ (Metal Embossing) ಸ್ಪರ್ಧೆಯಲ್ಲಿ ಶಾಲೆಯನ್ನು ಪ್ರತಿನಿಧಿಸಿ ಜಿಲ್ಲಾ ಮಟ್ಟದಲ್ಲಿ A Grade ಗಳಿಸಿದ್ದಾರೆ.

💐 ಅನುಶ್ರೀ ಎಸ್.

💐 ವರ್ಷಾ ಕೆ.

ಖಂಡೇರಿ ಮನೆತನದ ವರ್ಷಾ ಕೆ ಅವರು ನಿಲಂಬೂರಿನ ನಿವಾಸಿ . ಪ್ರದೀಪ್ ಕೆ ಹಾಗೂ ವಿದ್ಯಾಸರಸ್ವತಿ ಕೆ ದಂಪತಿಯ ಪುತ್ರಿ. ಇವರು ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಎಂ.ಟಿ.ಎಚ್.ಎಸ್.ಎಸ್ ಚುಂಗತ್ತರ (MTHSS Chungathara) ಶಾಲೆಯ ವಿದ್ಯಾರ್ಥಿನಿ. ವರ್ಷಾ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಇವರು ಭರತನಾಟ್ಯ ಹಾಗೂ ಕುಚಿಪುಡಿ ಕಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಹಾಗೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. Electronic Keyboard ಪರೀಕ್ಷೆಯ 2ನೇ ಹಂತವನ್ನು Distinction ಸಹಿತ ಉತ್ತೀರ್ಣರಾಗಿದ್ದಾರೆ. Taekwondo ನಲ್ಲಿ Green Belt ಪಡೆದಿದ್ದಾರೆ.


💐 ಶಿಖಾ ಕೆ. ಎಸ್.

ಗದ್ದೆಮನೆಯ ಶಿಖಾ ಕೆ ಎಸ್ ಅವರು ಸತೀಶ್ ಕುಮಾರ್ ಕೆ ಹಾಗೂ ರೇಖಾ ಸತೀಶ್ ದಂಪತಿಯ ಪುತ್ರಿ. ಇವರು ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ವಿದ್ಯಾರ್ಥಿನಿ. ಇವರು ಭಾರತ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸುವ ಮಹಾಭಾರತ ಪರೀಕ್ಷೆಯಲ್ಲೂ ದ್ವಿತೀಯ ಸ್ಥಾನದೊಂದಿಗೆ ಪದಕ ಪಡೆದಿದ್ದರು.


💐 ಶ್ರಾವ್ಯ ಎಂ .


