
Event · February 12, 2026
ಕರಾಡ ವಿಶ್ವ ವೆಬಿನಾರ್ ಸರಣಿ -34
14/02/2026ರ ಶನಿವಾರ ಸಂಜೆ 7.30ಕ್ಕೆ ; ಸಂಪನ್ಮೂಲ ವ್ಯಕ್ತಿ : ಶ್ರೀಯುತ ಅಶೋಕ ಮುಂಡಕಾನ ; ವಿಷಯ : ಮಧುಮೇಹ - ಭಯ ಬೇಡ, ಜಾಗ್ರತೆ ಇರಲಿ
ಈ ಸರಣಿ ಕಾರ್ಯಕ್ರಮದ ಅಂಗವಾಗಿ 14/02/2026ರ ಶನಿವಾರ ಸಂಜೆ 7.30ಕ್ಕೆ ಮಧುಮೇಹ: ಭಯ ಬೇಡ, ಜಾಗ್ರತೆ ಇರಲಿ ಎನ್ನುವ ಪ್ರಚಲಿತ ವಿಷಯದ ಕುರಿತು ಶ್ರೀಯುತ ಅಶೋಕ ಮುಂಡಕಾನ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/ykz-gpuu-tfj
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ ಪುತ್ತಿಗೆ ಗ್ರಾಮದ ಮುಂಡಕಾನ ಪದ್ಮನಾಭ ಭಟ್-ಜಲಜಾಕ್ಷಿ ದಂಪತಿಯ ಹಿರಿಯ ಪುತ್ರರಾಗಿ 30-06-1964ರಂದು ಜನನ.
★ ಪುತ್ತಿಗೆ ಹಾಗೂ ನೀರ್ಚಾಲು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ.
★ ಉಜಿರೆಯ ಧರ್ಮಸ್ಥಳ ಶಾಲೆಯಲ್ಲಿ ಹೈಸ್ಕೂಲ್ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ ಶಿಕ್ಷಣ.
★ ಉದ್ಯೋಗವನ್ನರಸಿ ಹುಬ್ಬಳ್ಳಿಗೆ ಬಂದು Pharmaceuticals ಕಂಪನಿಯ ಪ್ರತಿನಿಧಿಯಾಗಿ ಉದ್ಯೋಗದ ಆರಂಭ.
★ ಸುಮಾರು ಮೂರೂವರೆ ದಶಕಗಳ ಕಾಲ ಹಲವು ಪ್ರತಿಷ್ಠಿತ ಫಾರ್ಮಾ ಕಂಪೆನಿಗಳಲ್ಲಿ ಮಾರ್ಕೆಟಿಂಗ್, ಮ್ಯಾನೇಜ್‌ಮೆಂಟ್ ಅನುಭವ.
★ 2000ನೆಯ ಇಸವಿಯಲ್ಲಿ Diacare ಹೆಸರಿನ ಸ್ವಂತ ಸಂಸ್ಥೆ ಸ್ಥಾಪಿಸಿ, ಮಧುಮೇಹ ಹಾಗೂ ಇತರೆ ಔಷಧಿಗಳ ವಿತರಣೆ ಹಾಗೂ ಮಧುಮೇಹದ ಬಗ್ಗೆ ಶಿಕ್ಷಣ ನೀಡುತ್ತಾ, ಚಿಕಿತ್ಸಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
★ 2023ರಿಂದ ತಮ್ಮದೇ ಬ್ರಾಂಡ್ (Diacare Pharmaceuticals) ನೋಂದಾವಣೆ ಮಾಡಿಕೊಂಡು ಹಲವು ಉಪಯುಕ್ತ ಔಷಧಿಗಳ ತಯಾರಿಕೆ ಹಾಗೂ ವಿತರಣೆ.
★ ಸಮಾಜದ ಆಗು ಹೋಗುಗಳ ಕುರಿತು ವಿಶೇಷ ಆಸಕ್ತಿ. ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
★ ಬೆಂಗಳೂರು ಕರಾಡ ಸಮಾಜದ ಕಾರ್ಯದರ್ಶಿಯಾಗಿ, ಮುಂದೆ ಅಧ್ಯಕ್ಷರಾಗಿ, ಮುಂಚೂಣಿಯಲ್ಲಿ ನಿಂತು ರಜತ ಸಂಭ್ರಮ ವರ್ಷದಲ್ಲಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ.
★ ಪತ್ನಿ ಸ್ನೇಹಲತಾ, ಮಕ್ಕಳೊಂದಿಗೆ ಬೆಂಗಳೂರಿನ ಪದ್ಮನಾಭ ನಗರದ 'ಅಭಿಲಾಷಾ' ಮನೆಯಲ್ಲಿ ವಾಸ.
