
Article · September 13, 2026
ಮಿಂಚು....
ಶ್ಯಾಮ್ ಪ್ರಸಾದ್ ಭಟ್
ನನ್ನ ಪಾದರಕ್ಷೆ ಕಿತ್ತೋಗಿತ್ತು. ಹೊಸ ಪಾದರಕ್ಷೆ ಖರೀದಿಸಲು ಮಡದಿಯ ಪಾದರಕ್ಷೆ ಧರಿಸಿಕ್ಕೊಂಡು ಹೋದೆ. ಈ ಬಿಡುವಿಲ್ಲದ ಜಗದೊಳಗಡೆ ನಾನು ಲೇಡಿಸ್ ಚಪ್ಪಲಿ ತೊಟ್ಟಿದ್ದನ್ನು ಗಮನಿಸುವರಾರೂ ಇರಲ್ಲ ಎಂದುಕ್ಕೊಂಡಿದ್ದೆ. ಕೆಲವು ಪರಿಚಯಸ್ಥರು ದಾರಿಯಲ್ಲಿ ಸಿಕ್ಕಿದ್ದರು.ಯಾರೂ ನನ್ನ ಚಪ್ಪಲಿ ಬಗ್ಗೆ ಮಾತೆತ್ತಲಿಲ್ಲ. ಹೊಸ ಚಪ್ಪಲಿ ತಗೊಂಡ್ ಮನೆಗೆ ಬಂದೆ. ಹಾಗೇ ಮೊಬೈಲ್ ತೆರೆದಾಗ ವ್ಯಾಟ್ಸಫ್ ತುಂಬಾ ಸರ್ ನಿಮಗೆ ದೃಷ್ಟಿ ದೋಷ ಇದೆ,ಕನ್ನಡಕ ಮಾಡಿಸ್ಕೊಳ್ಳಿ ಎನುವ ಸಂದೇಶಗಳು ಬಂದಿದ್ದವು. ಕೆಲವರು ಮೊದಲು ಶುಗರ್ ಟೆಸ್ಟ್ ಮಾಡಿಸಿ,ಅದರಿಂದಲೂ ದೃಷ್ಟಿದೋಷ ಬರ್ತದೆ ಅಂದ್ರು. ಮತ್ತೆ ಕೆಲವರು ಐಡ್ರಾಪ್ ಸೀಸೆಯ ಫೋಟೋ ಕಳುಹಿಸಿ ಇದನ್ನು ಉಪಯೋಗಿಸಿ ಎನ್ನವ ಸಲಹೆ ಕೊಟ್ಟಿದ್ರು. ಹೊಸ ಚಪ್ಪಲಿಯಿಂದ ಹಣೆ ಚಚ್ಚಿಕೊಳ್ಳುವ ಪರಿಸ್ಥಿತಿ ನನ್ನದಾಯ್ತು..
Creative Writings
